Connect with us

ಸಿನಿ ಸುದ್ದಿ

ಕನ್ನಡಿಗರಿಂದ ವಿನೂತನ ಪ್ರಯತ್ನ..ನಾಲ್ಕು ಭಾಷೆಯಲ್ಲಿ ಕಿರುಚಿತ್ರ ʻವಿನಿಮಯʼ

Published

on

Spread the love

ಪ್ರತಿದಿನ ಪ್ರತಿಯೊಬ್ಬರು ಒಂದೊಂದು ವಿನೂತ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ, ಅದರಲ್ಲೂ ಮಾಧ್ಯಮ ಲೋಕದಲ್ಲಿ ಅದು ಸ್ವಲ್ಪ ಹೆಚ್ಚು ಅಂತಾನೇ ಹೇಳ ಬಹುದು, ಇನ್ನು ಸಿನಿಮಾ, ಕಿರುಚಿತ್ರದ ಮಟ್ಟಿಗೆ ಸ್ವಲ್ಪ ಜಾಸ್ತಿ ಅಂತಾನೇ ಹೇಳಬಹುದು, ಆ ಸಾಲಿಗೆ ಮತ್ತೊಂದು ಕಿರು ಚಿತ್ರ ಸೇರ್ಪಡೆಯಾಗುತ್ತಿದೆ. ಹೌದು ಈ ಕಿರು ಚಿತ್ರದ ಹೆಸರು ʻವಿನಿಮಯʼ , ಅರ್ಜುನ್‌ ಕಾಮತ್‌ ಅವರ ಕಲ್ಪನೆಯಲ್ಲಿ ಮೂಡಿ ಬಂದಿರೋ ಈ ಕಿರುಚಿತ್ರ, ಒಂದು ಹೊಸ ಹುರುಪಿನೊಂದಿಗೆ ಹೊಸ ಕಥೆಯೊಂದಿಗೆ ಬರ್ತಾ ಇದೆ. ನಮ್ಮ ನೆಲದ, ನಮ್ಮ ಸೊಗಡಿನ ಚಿತ್ರವನ್ನ ಇತರ ಭಾಷೆಯ ಚಿತ್ರ ರಸಿಕರಿಗೆ ಸವಿಯುವ ಹಾಗೆ ನೀಡಬಯಸಿದ ಮನಗಳು ಈಗ ತಮ್ಮ ‘ವಿನಿಮಯ’ ಎಂಬ ವಿಭಿನ್ನ ಕಿರುಚಿತ್ರವನ್ನ ಇದೇ 20ನೇ ತಾರೀಖು ಬಿಡುಗಡೆಗೊಳಿಸಲ್ಲಿದ್ದಾರೆ…

ಫ್ಯಾಂಟಸಿ ಆಧಾರಿತ ಕಿರುಚಿತ್ರದ ನಿರ್ಮಾಣ ಎಂದಿಗೂ ಸವಾಲಿನ ಕೆಲಸ.. ಇಂತಹ ರಿಸ್ಕ್ ಅನ್ನ ತೆಗೆದುಕೊಂಡಿರುವ ‘ವಿನಿಮಯ’ ತಂಡ ಇದೇ ವಾರ ತಮ್ಮ ಕಿರುಚಿತ್ರವನ್ನ ಕನ್ನಡ ಚಿತ್ರ ರಸಿಕರ ಮುಂದೆ ಇಡಲಿದೆ.. ಅರ್ಜುನ್ ಕಾಮತ್ ನಿರ್ದೇಶನ ಮಾಡಿರುವ ಈ ಕಿರುಚಿತ್ರಕ್ಕೆ ನಾಗೇಶ್ ಎಂ ಹಾಗು ಸಂತೋಷ್ ಜಿ ನಿರ್ಮಾಣ ಮಾಡಿದ್ದಾರೆ..

ಸದ್ಯಕ್ಕೆ ಈ ಕಿರುಚಿತ್ರದಲ್ಲಿರುವ ಹಾಡೊಂದನ್ನ ಮೊದಲಿಗೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ‘Humanity Anthem’ ಇಷ್ಟವಾಗ್ತಿದೆ.. ಇದೇ 20ಕ್ಕೆ ಕನ್ನಡದ ಅವತರಣಿಕೆಯ ‘ವಿನಿಮಯ’ ಬಿಡುಗಡೆಯಾಗಲ್ಲಿದ್ದು, ಇನ್ನೊಂದು ವಾರದಲ್ಲಿ ತಮಿಳು ತೆಲುಗು ಹಾಗು ಹಿಂದಿಯಲ್ಲಿ ಬಿಡುಗಡೆಯಾಲಿದೆ..

Continue Reading
Click to comment

Leave a Reply

Your email address will not be published. Required fields are marked *