Connect with us

ಐತ್ ಲಗಾ

ಗರ್ಲ್‌ಪ್ರೆಂಡ್ ಬೇಕಂತ 2000 ಕಿ.ಮಿ. ವಾಕಿಂಗ್…!!! ಹೌದು ಹುಲಿಯಾ…!!!

Published

on

Spread the love

ಸಾಮಾನ್ಯವಾಗಿ ಪ್ರಾಣಿ & ಪಕ್ಷಿಗಳು ಆಹಾರ, ನೀರು, ಇರಲು ಸೂಕ್ತವಾದ ಜಾಗ ಮತ್ತು ಸಂಗಾತಿಗಳನ್ನು ಅರಸಿ ಅಲೆಯುತ್ತವೆ. ಅದರಲ್ಲೂ ಗಮಡು ಪ್ರಾಣಿಗಳು ಹೆಣ್ಣುಗಳಿಗೆ ಹೀಗೆ ಅಲೆಯುವುದು, ಕಚ್ಚಾಡುವುದು ಅತ್ಯಂತ ಸಹಜ.

ಇಲ್ಲೊಬ್ಬ ದೇಸೀ ಹುಲಿರಾಯ ಸಂಗಾತಿಯನ್ನು ಅರಸಿ 2000 ಕಿಮೀ ನಡೆದುಕೊಂಡು ಹೋದ ಹುಲಿಯ ಕಥೆಯೊಂದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿಕೊಂಡಿದ್ದಾರೆ.

“ಭಾರತದ ಈ ಹುಲಿ ದಾಖಲೆಯ ದೂರವನ್ನು ಕ್ರಮಿಸುವ ಮೂಲಕ ಧ್ಯಾನ್‌ಗಂಗಾ ಕಾಡನ್ನು ಸೇರಿಕೊಂಡಿದೆ. ಇವನು ಕಾಲುವೆಗಳು, ಮೈದಾನಗಳು, ಕಾಡು, ರಸ್ತೆಗಳ ಮೂಲಕ ಹಾದು 2000 ಕಿಮೀ ನಡೆದರೂ ಸಹ ಒಂದೇ ಒಂದು ಬಾರಿಯೂ ಮಾನವರೊಂದಿಗೆ ಘರ್ಷಣೆಗೆ ಇಳಿದ ದಾಖಲೆ ಕಂಡುಬಂದಿಲ್ಲ. ಹಗಲು ವೇಳೆ ವಿಶ್ರಾಂತಿ ಪಡೆಯುತ್ತಾ, ಇರುಳಿನಲ್ಲಿ ನಡೆದಾಡುತ್ತಾ ಸೂಕ್ತ ಸಂಗಾತಿಯ ಹುಡುಕಾಟದಲ್ಲಿ ಈ ಹುಲಿ ನಡೆದುಕೊಂಡು ಹೋದ ಪಥವನ್ನು ನಿರಂತರವಾಗಿ ಮಾನಿಟರ್‌ ಮಾಡಲಾಗಿತ್ತು,” ಎಂದು ಕಸ್ವಾನ್ ಬರೆದಿದ್ದಾರೆ.

ಇದಕ್ಕೆ ಹಾಸ್ಯಮಯವಾದ ಪ್ರತಿಕ್ರಿಯೆಗಳು ನೆಟ್ಟಿಗರಿಂದ ಬಂದಿದ್ದು, “ಈ ಹುಲಿಗಳಿಗೆ ಟಿಂಡರ್‌ ಅಗತ್ಯವಿದೆ,” ಎಂದಿದ್ದಾನೆ. ಮತ್ತೊಬ್ಬ ನೆಟ್ಟಿಗ, “ಇವನಿಗೂ ಸಹ ಕಿರಿಕಿರಿ ಮಾಡುವ ಸಂಬಂಧಿಗಳು ಇರಬಹುದು,” ಎಂದಿದ್ದಾರೆ. ಒಟ್ಟಾರೆ, ನೆಟ್ಟಿಗ ಸಮುದಾಯವು ಈ ಹುಲಿಯ ಪ್ರಹಸವನ್ನು ಕಂಡು ಸಖತ್‌ ಎಂಜಾಯ್ ಮಾಡುತ್ತಿದೆ.
• Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *