Connect with us

ಏನ್ ಸುದ್ದಿ?

ಕಿರುತೆರೆ ಮೇಲೆ ಮತ್ತೆ ಬರಲಿದ್ದಾರೆ ಶಕ್ತಿಮಾನ್‌ ಮತ್ತು ಚಾಣಾಕ್ಯ…!!!

Published

on

Spread the love

ಅದಾಗಲೇ ರಾಮಾಯಣ ಧಾರಾವಾಹಿಯನ್ನು ಮರು ಪ್ರಸಾರ ಮಾಡುತ್ತಿರುವ ಪ್ರಸಾರ ಭಾರತಿ, ಏಪ್ರಿಲ್ 1ರಿಂದ ಪ್ರತಿ ಮದ್ಯಾಹ್ನ ಒಂದು ಗಂಟೆಗೆ ಮುಕೇಶ್ ಖನ್ನಾ ಅಭಿನಯದ ಶಕ್ತಿಮಾನ್‌ ಸರಣಿಯನ್ನು ಬಿತ್ತರಿಸಲಿದೆ.

ಇದರೊಂದಿಗೆ ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಚಾಣಾಕ್ಯ ಹಾಗೂ ಉಪನಿಷದ್ ಗಂಗಾ ಸರಣಿಗಳು ಸಹ ಡಿಡಿ ಭಾರತಿಯಲ್ಲಿ ಪ್ರಸಾರವಾಗಲಿವೆ.

ಕೊರೋನಾವೈರಸ್‌ ತಡೆಗಟ್ಟಲು ದೇಶಾದ್ಯಂತ 21 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿದ ಬಳಿಕ ದೂರದರ್ಶನದ ರಾಮಾಯಣ ಹಾಗೂ ಮಹಾಭಾರತ ಸರಣಿಗಳ ಮರುಪ್ರಸಾರ ಮಾಡಲು ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿನಂತಿ ಮಾಡಿಕೊಂಡಿದ್ದಾರೆ.

ದೇಶೀ ಸೂಪರ್‌ ಹೀರೋ ಆದ ಶಕ್ತಿಮಾನ್‌ ಸರಣಿಯು 1997-2005ರ ವರೆಗೆ ಮನೆಮಾತಾಗಿತ್ತು.
• Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *