Connect with us

ಸಿನಿ ಸುದ್ದಿ

“ಸಲಗ”ನ ಟೈಟಲ್ ಟ್ರ್ಯಾಕ್ ಹಾಡಿರೋದು ಯಾರು ಗೊತ್ತಾ…!!!?

Published

on

Spread the love

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಸೆನ್ಸೇಷನ್ ಸೃಷ್ಟಿಸಿರೋ ಸಿನಿಮಾ “ಸಲಗ”.‌ದುನಿಯಾ ವಿಜಿ ನಟಿಸಿ, ನಿರ್ದೇಶಿಸಿರೋ ಸಲಗ ಹಲವು ವಿಶಯಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಈಗ ತನ್ನ ವಿಶಿಷ್ಟ ಟೈಟಲ್ ಟ್ರ್ಯಾಕ್ ನಿಂದ ಸುದ್ದಿಯಲ್ಲಿದೆ.

ಸಲಗನ ಟೈಟಲ್ ಟ್ರ್ಯಾಕ್ ಹಾಡಲು ಮಲೇಷಿಯಾದಿಂದ ಸಿಂಗರ್ ಒಬ್ಬರನ್ನು ಕರೆಸಲಾಗಿತ್ತು. ಇವರ ಹೆಸರು ಯೋಗಿ ಬಿ. ಇವರು ಮಲೆಷಿಯನ್ ರ್ಯಾಪರ್. ಈ ಇಂಟರ್ ನ್ಯಾಷನಲ್ ಸಿಂಗರ್ ಕಂಠದಲ್ಲಿ ಸಲಗನ ಟೈಟಲ್ ಹಾಡು ಸಖತ್ತಾಗಿ ಮೂಡಿಬಂದಿದೆಯಂತೆ. ರಜನಿಕಾಂತ್ ರ ‘ದರ್ಬಾರ್’, ‘ಕಾಲ’, ಧನುಷ್ ರ ‘ಪಟಾಸ್’ ಸಿನಿಮಾಗಳಲ್ಲಿ ಯೋಗಿ ರ್ಯಾಪ್ ಮಾಡಿದ್ದಾರೆ.

ಸಲಗನಿಗೆ ಮ್ಯೂಸಿಕ್ ಕಂಪೋಸ್ ಮಾಡಿರೊದು ‘ಟಗರು ಬಂತು ಟಗರು’ ಖ್ಯಾತಿಯ ಚರಣ್ ರಾಜ್. ಇವರ ಸ್ಪೆಶಲ್ ಟ್ಯೂನಿಗೆ ಯೋಗಿ ‌ಮ್ಯಾಜಿಕಲ್ ವಾಯ್ಸ್ ನೀಡಿದ್ದಾರೆ. ನಮ್ಮ ಸ್ಯಾಂಡಲ್ ವುಡ್ ನಲ್ಲೂ ಸಾಕಷ್ಟು ಜನ ಯೋಗಿ ಅಭಿಮಾನಿಗಳಿದ್ದಾರೆ. ಯೋಗಿಯನ್ನು ನೋಡಲು ಸಿಂಗರ್ ಸಂಜಿತ್ ಹೆಗಡೆ ಸೇರಿದಂತೆ ಕೆಲವು ಸಿಂಗರ್ಸ್ ಚರಣ್ ರಾಜ್ ಸ್ಟುಡಿಯೋಗೆ ಬಂದಿದ್ದರು.

‘ಎಎಸ್ಎನ್’ನ ‘ಹ್ಯಾಂಡ್ಸ್ ಅಪ್’ ಹಾಡು ಬರೆದಿರೊ ನಾಗರ್ಜುನ ಶರ್ಮಾ ಸಲಗನ ಶೀರ್ಶಿಕೆ ಗೀತೆ ಬರೆದಿದ್ದಾರೆ. ಟಗರು ಬಂತು ಟಗರು ರೀತಿಯಲ್ಲೇ ಇದು ಸಿನಿರಸಿಕರಿಗೆ ಸಖತ್ ಇಷ್ಟವಾಗುತ್ತೆ ಅನ್ನೋದು ಚಿತ್ರತಂಡದ ಮಾತು. ಎಲ್ಲವೂ ಅಂದುಕೊಂಡಂತೆ ಆದರೆ, ಯುಗಾದಿಗೆ ಸಲಗ ಥಿಯೇಟರ್ ಗಳಲ್ಲಿ ಘೀಳಿಡಲಿದ್ದಾನೆ.
• Karnaataka.in Cine Desk.

Continue Reading
Click to comment

Leave a Reply

Your email address will not be published. Required fields are marked *