Connect with us

ಏನ್ ಸುದ್ದಿ?

11 ಲಕ್ಷ ಕೋಟಿರೂಗಳ ಮಾರುಕಟ್ಟೆ ಮೌಲ್ಯ ತಲುಪಿದ ಭಾರತದ ಮೊದಲ ಕಂಪನಿ ಯಾವುದು ಗೊತ್ತೇ?

Published

on

Spread the love

ಶೇರು ಮಾರುಕಟ್ಟೆಯಲ್ಲಿ ತನ್ನ ಪಾಲಿನ ಶೇರುಗಳ ಬೆಲೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯವು 11 ಲಕ್ಷ ಕೋಟಿ ರೂಗಳ ಗುರಿಯನ್ನು ದಾಟಿದೆ.

$150 ಶತಕೋಟಿಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ದೇಶದ ಮೊದಲ ಉದ್ಯಮ ಸಮೂಹವಾಗಿದೆ ರಿಲಯನ್ಸ್‌ ಇಂಡಸ್ಟ್ರೀಸ್‌ (RIL). ಬಾಂಬೆ ಶೇರು ಮಾರುಕಟ್ಟೆಯಲ್ಲಿ, ರಿಲಯನ್ಸ್‌ನ ಮಾರುಕಟ್ಟೆಯ ಇಂದಿನ ಬೆಳಗ್ಗಿನ ವಹಿವಾಟಿನ ಮೌಲ್ಯವು 28,248.97 ಕೋಟಿ ರೂಗಳನ್ನು ಮುಟ್ಟುವ ಮೂಲಕ ರಿಲಯನ್ಸ್‌ನ ಒಟ್ಟಾರೆ ಮಾರುಕಟ್ಟೆ ಮೌಲ್ಯವು 11,43,667 ಕೋಟಿಗಳಷ್ಟಕ್ಕೆ ಏರಿಕೆ ಕಂಡಿದೆ.

ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ಜಾಗತಿಕ ಹೂಡಿಕೆದಾರರಿಂದ 1.69 ಲಕ್ಷ ಕೋಟಿ ರೂಗಳ ಹೂಡಿಕೆ ಆಕರ್ಷಿಸಿದ ಬಳಿಕ ರಿಲಯನ್ಸ್ ಸಮೂಹವು ಸಾಲಮುಕ್ತವಾಗಿದೆ ಎಂದು ಮುಖೇಶ್ ಅಂಬಾನಿ ಇದೇ ವೇಳೆ ಘೋಷಿಸಿದ್ದಾರೆ.

ತನ್ನ ಡಿಜಿಟಲ್ ಅಂಗವಾದ ಜಿಯೋದ ಕಾಲು ಭಾಗದಷ್ಟು ಹೂಡಿಕೆಯನ್ನು ಜಾಗತಿಕ ತಂತ್ರಜ್ಞಾನ ಹೂಡಿಕೆದಾರರಿಗೆ ಕೊಟ್ಟಿರುವ ರಿಲಯನ್ಸ್‌ ಇದರಿಂದ 1.15 ಲಕ್ಷ ಕೋಟಿ ರೂಗಳನ್ನು ಬಾಚಿಕೊಂಡಿದೆ. ಜೊತೆಗೆ ಕಳೆದ 58 ದಿನಗಳ ಅವಧಿಯಲ್ಲಿ 53,124 ಕೋಟಿರೂಗಳನ್ನು ಹಕ್ಕುಗಳ ಮಾರಾಟದಿಂದ ಕ್ರೋಢೀಕರಿಸಿಕೊಂಡಿದೆ.

Continue Reading
Click to comment

Leave a Reply

Your email address will not be published. Required fields are marked *