Connect with us

Astrology

ಇಂದಿನ ರಾಶಿ ಭವಿಷ್ಯ | ಮಾರ್ಚ್ 17, 2020

Published

on

Spread the love

ಮೇಷ:- ಚುನಾವಣಾ ರಂಗದಲ್ಲಿ ಧುಮುಕಬೇಕೆಂಬ ಮಹತ್ತರ ಆಸೆಗೆ ಜನ ಬೆಂಬಲ ದೊರೆಯುವುದು. ಗ್ರಹಗತಿಗಳು ನಿಮ್ಮ ಕಡೆ ಇರುವುದು. ಗೆಲುವು ನಿಶ್ಚಿತ. ಹಾಗಂತ ಅಹಂಕಾರ ಬೇಡ. ಎದುರಾಳಿಯೂ ಅಷ್ಟೇ ಶಕ್ತಿಶಾಲಿಯಾಗಿರುವರು.

ವೃಷಭ:- ದುಡಿಮೆ, ದುಡ್ಡಿನ ತಾಯಿ ಎಂದರು ಹಿರಿಯರು. ಹಾಗಾಗಿ ನೀವು ಮಾಡುವ ಕೆಲಸವು ಕಾಯಾ, ವಾಚಾ, ಮನಸ್ಸುಗಳಿಂದ ಕೂಡಿರಲಿ. ಯಶಸ್ಸು ನಿಮ್ಮದಾಗುವುದು. ಹಣವು ನೀರಿನಂತೆ ಖರ್ಚಾಗುವುದು.

ಮಿಥುನ:- ನಿಮಗೆ ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಬೇಸರವೇ ಬಂದಿರಬಹುದು. ಆದರೆ ಹರಿ ನಿನ್ನೊಲುಮೆ ಆಗುವ ತನಕ ಸುಮ್ಮನಿರುವುದು ಲೇಸು ಎಂಬಂತೆ ಬಹು ತಾಳ್ಮೆಯಿಂದ ಇದ್ದಲ್ಲಿ ಅನುಕೂಲವಾಗುವುದು

ಕಟಕ:- ಸಹಾಯ ಮಾಡಬೇಕೆಂದು ಬಂದಿದ್ದ ನಿಮ್ಮ ಸ್ನೇಹಿತರು ನಿಮ್ಮ ಕೋಪದ ಪ್ರದರ್ಶನದಿಂದಾಗಿ ನಿಮಗೆ ಸಹಕರಿಸದೆ ಹೋಗುವ ಸಾಧ್ಯತೆ ಇದೆ. ನಿಮ್ಮ ತಪ್ಪನ್ನು ಅರಿತು ಬಾಳುವುದು ಕ್ಷೇಮ.

ಸಿಂಹ:- ಮಡದಿ, ಮಕ್ಕಳು ಹೆಚ್ಚು ಹೆಚ್ಚು ಮನೋಯಾತನೆ ತರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ ಅವರುಗಳ ವಿಶ್ವಾಸವನ್ನು ಪಡೆದು ಅವರ ಮನ ಗೆಲ್ಲಿ. ಇದರಿಂದ ನಿಮಗೆ ಲಾಭ ಕಂಡುಬರುವುದು.

ಕನ್ಯಾ:- ಚುನಾವಣೆ ಘೋಷಿಸಿರುವ ಸಮಯದಲ್ಲಿ ರಾಜಕೀಯ ಮುಖಂಡರುಗಳು ನಿಮ್ಮ ಬಳಿ ಸಹಾಯ ಹಸ್ತ ಚಾಚುವರು. ರಾಜಕೀಯ ಭವಿಷ್ಯ ನುಡಿಯುವುದು ಕಠಿಣವಾದರೂ ದೈವದ ಬಲದಿಂದ ನುಡಿದ ನುಡಿಗಳು ಸತ್ಯವಾಗುವ ಸಾಧ್ಯತೆ ಇದೆ.

ತುಲಾ:- ದಟ್ಟ ವಾಹನ ಸಂಚಾರದ ಸಂದರ್ಭದಲ್ಲಿ ಹುಷಾರಾಗಿರಿ. ನಿಮ್ಮ ಹಿಂದೆಯೇ ಬರುವ ವಾಹನ ಸವಾರರು ನಿಮಗೆ ಡಿಕ್ಕಿ ಹೊಡೆಯುವ ಸಂದರ್ಭವಿದೆ. ಆದರೆ ಅದನ್ನೇ ದೊಡ್ಡದು ಮಾಡಿ ರಸ್ತೆ ಮಧ್ಯದಲ್ಲಿ ಜಗಳಕ್ಕೆ ಇಳಿದರೆ ಇತರರಿಗೆ ತೊಂದರೆಯಾಗುವುದು. ತಾಳ್ಮೆ ಇರಲಿ.

ವೃಶ್ಚಿಕ:- ಹಿರಿಯರ ಆರೈಕೆ ನಿಮ್ಮ ಪ್ರಥಮ ಪ್ರಾಶಸ್ತ್ಯವಾಗಿರಲಿ. ಈ ಜಾತಕದವರು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದಲ್ಲಿಎರಡು ಬಾರಿ ಚಿಂತಿಸಿ ಮುಂದುವರಿದರೆ ಕ್ಷೇಮ. ಜನರ ನಾಡಿ-ಮಿಡಿತವನ್ನು ಬಲ್ಲಜನರು ನಿಮ್ಮನ್ನು ಗೌರವಿಸಿ ಆದರಿಸುವರು.

ಧನುಸ್ಸು:– ನಿಮ್ಮ ಮನೆಯಲ್ಲಿನ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಮಾಡಿಕೊಳ್ಳಿ. ಇಲ್ಲದೆ ಇದ್ದಲ್ಲಿ ಮುಂದೊಂದು ದಿನ ದೊಡ್ಡ ಹೆಮ್ಮರವಾಗಿ ನಿಮ್ಮನ್ನು ಕಾಡಿಸುವುದು. ದಶರಥಕೃತ ಶನೇಶ್ಚರರ ಮಂತ್ರ ಪಠಿಸಿ.

ಮಕರ:- ನಿಮ್ಮ ಕೈಕೆಳಗಿನ ಕೆಲಸಗಾರರು ನಿಮ್ಮ ಕೋಪತಾಪಗಳನ್ನು ಕಂಡು ರೋಸಿ ಹೋಗುವರು. ಎಲ್ಲದಕ್ಕೂ ಪರರನ್ನು ದೂಷಿಸುವುದನ್ನು ನಿಲ್ಲಿಸಿ. ಇದರಿಂದ ಮಹತ್ತರ ಕಾರ್ಯಗಳು ನೀವು ಎಣಿಸಿದಂತೆ ನಡೆಯುವುವು.

ಕುಂಭ:- ನಿಮ್ಮ ಕೆಲಸದ ಸ್ಥಳದಲ್ಲಿ ಬಾಸ್‌ ನಿಮ್ಮನ್ನು ಪರೀಕ್ಷಿಸುವ ಸಾಧ್ಯತೆಗಳು ಇರುತ್ತವೆ. ಇದರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಪುಟಕ್ಕಿಟ್ಟ ಚಿನ್ನದಂತೆ ನೀವು ಇನ್ನು ಹೆಚ್ಚು ಪರಿಶುದ್ಧತೆಯಿಂದ ಬೀಗುವಂತೆ ಆಗುವುದು.

ಮೀನ:- ನಿಮ್ಮ ಸಮೀಪದ ಜನರೇ ನಿಮ್ಮನ್ನು ಅನಾದರದಿಂದ ಕಾಣುವ ಸಾಧ್ಯತೆ ಇದೆ. ಕುಲದೇವರ ಸ್ಮರಣೆ ಮಾಡುವುದು ಕ್ಷೇಮ. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ

ಓಂ ಶ್ರೀ ಮಹಾ ಕಾಲಭೈರವ ಜ್ಯೋತಿಷ್ಯ ಕೇಂದ್ರ
ಪಂಡಿತ್ ವೈದಿಕ್ ಶ್ರೀ ಗಣಪತಿ ಭಟ್

ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಗುರುಗಳಿಗೆ ಕರೆಮಾಡಿ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನು ಬದಲಾಯಿಸಬಹುದು
ಭೇಟಿಮಾಡಲು ಕರೆಮಾಡಿ : 8088827292

Continue Reading
Click to comment

Leave a Reply

Your email address will not be published. Required fields are marked *