Connect with us

ಏನ್ ಸುದ್ದಿ?

ಪ್ರಧಾನಿ ಯೋಚಿಸಿ ಮಾತನಾಡಬೇಕಿದೆ: ಮನಮೋಹನ್ ಸಿಂಗ್

Published

on

Spread the love

ಲಡಾಖ್‌ ಗದ್ದಲದ ಕುರಿತಂತೆ ಇದೇ ಮೊದಲ ಬಾರಿಗೆ ಮಾತನಾಡಿರುವ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪದ ಬಳಕೆ ಬಗ್ಗೆ ಇನ್ನಷ್ಟು ಜಾಗೃತರಾಗಿರಬೇಕಿದ್ದು, ತಮ್ಮದೇ ಪದಗಳನ್ನು ಬಳಸಿಕೊಂಡು ಚೀನಾ ಬೇರೆ ರೀತಿಯ ಆಟಗಳನ್ನು ಆಡಲು ಅವಕಾಶ ನೀಡಬಾರದು ಎಂದಿದ್ದಾರೆ.

“ತಪ್ಪು ಮಾಹಿತಿಗಳನ್ನು ಹಬ್ಬಿಸುವುದು ರಾಜತಾಂತ್ರಿಕತೆ ಹಾಗೂ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ. ಕಣ್ಣೊರೆಸುವ ಹೇಳಿಕೆಗಳನ್ನು ನೀಡುವ ಮೂಲಕ ಸತ್ಯಾಂಶವನ್ನು ಬಚ್ಚಿಡಲು ಸಾಧ್ಯವಿಲ್ಲ,” ಎಂದು ಸಿಂಗ್ ಇದೇ ವೇಳೆ ತಿಳಿಸಿದ್ದಾರೆ.

“ಈ ಪರಿಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಬೇಕೆಂದು ನಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸರ್ಕಾರವನ್ನು ಆಗ್ರಹಿಸುತ್ತಿದ್ದು, ಈ ಮೂಲಕ ಕರ್ನಲ್ ಬಿ. ಸಂತೋಷ್‌ ಬಾಬು ಹಾಗೂ ಹುತಾತ್ಮ ಯೋಧರ ತ್ಯಾಗಗಳಿಗೆ ನ್ಯಾಯ ಸಿಗುವಂತೆ ಮಾಡಿ ನಮ್ಮ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕೆಂಬುದು ನಮ್ಮ ಆಶಯ,” ಎಂದು ಸಿಂಗ್ ತಿಳಿಸಿದ್ದಾರೆ.

“ಸರಿಯಾದ ಕ್ರಮವನ್ನು ತೆಗೆದುಕೊಳ್ಳದೇ ಇದ್ದಲ್ಲಿ ಜನರ ನಂಬಿಕೆಗೆ ಐತಿಹಾಸಿಕ ದ್ರೋಹ ಬಗೆದ ಕಳಂಕವನ್ನು ಈ ಸರ್ಕಾರ ಹೊರಲಿದೆ,” ಎಂದು ಸಿಂಗ್ ಆಪಾದನೆ ಮಾಡಿದ್ದಾರೆ.

“ಗಲ್ವಾನ್ ಕಣಿವೆ ಹಾಗೂ ಪಂಗಾಂಗ್ ತ್ಸೋ ಸರೋವರ ‌ಪ್ರದೇಶಗಳ ಮೇಲೆ ಏಪ್ರಿಲ್ 2020ರಿಂದಲೂ ಪದೇ ಪದೇ ಅತಿಕ್ರಮಣಗಳನ್ನು ಮಾಡುವ ಮೂಲಕ ಭಾರತದ ಸಾರ್ವಭೌಮತ್ವದಲ್ಲಿರುವ ಪ್ರದೇಶಗಳು ತನ್ನದೆಂದು ಚೀನಾ ಬಹಿರಂಗವಾಗಿ ಹೇಳಿಕೊಳ್ಳುತ್ತಿದೆ. ಈಗಿನ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸರ್ಕಾರದ ಎಲ್ಲಾ ವಿಭಾಗಗಳೂ ಒಮ್ಮತದಲ್ಲಿ ಕೆಲಸ ಮಾಡಿಕೊಂಡು ಕೈಮೀರಿ ಹೋಗದಂತೆ ನೋಡಿಕೊಳ್ಳುವುದನ್ನು ಖಾತ್ರಿ ಪಡಿಸಬೇಕು,” ಎಂದು ಸಿಂಗ್ ಸಲಹೆಗಳನ್ನು ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *