Connect with us

ಏನ್ ಸುದ್ದಿ?

ಚೀನೀಯರು ನಮ್ಮ ಪ್ರದೇಶದೊಳಗೆ ಕಾಲೇ ಇಟ್ಟಿಲ್ಲ: ಪ್ರಧಾನಿ ಮೋದಿ

Published

on

Spread the love

 

ಭಾರತ-ಚೀನಾ ಸೇನೆಗಳ ನಡವೆ ವಾಸ್ತವ ನಿಯಂತ್ರಣ ರೇಖೆ ಬಳಿ ಘರ್ಷಣೆ ನಡೆದ ವಿಚಾರವಾಗಿ ಸರ್ವ ಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಚೀನೀಯರು ನಮ್ಮ ಪ್ರದೇಶವನ್ನು ಪ್ರವೇಶಿಸಿಲ್ಲ ಹಾಗೂ ನಮ್ಮ ಯಾವುದೇ ಪೋಸ್ಟ್‌ಅನ್ನು ಹಿಡಿತಕ್ಕೆ ಪಡೆದುಕೊಂಡಿಲ್ಲ ಎಂದಿದ್ದಾರೆ.

“ಚೀನೀಯರು ನಮ್ಮ ಎಲ್ಲೆಯೊಳಗೆ ಬಂದೂ ಇಲ್ಲ, ಅಥವಾ ಯಾವುದೇ ಪೋಸ್ಟ್‌ಅನ್ನೂ ಅವರು ಹಿಡಿತಕ್ಕೆ ಪಡೆದುಕೊಂಡಿಲ್ಲ. ನಮ್ಮ 24 ಯೋಧರು ಹುತಾತ್ಮರಾಗುವ ಮುನ್ನ ನಮ್ಮ ಶತ್ರುಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆ,” ಎಂದಿದ್ದಾರೆ ಮೋದಿ.

“ನಮ್ಮ ದೇಶದ ಒಂದೇ ಒಂದು ಇಂಚು ಭೂಮಿಯನ್ನೂ ಸಹ ಯಾರೊಬ್ಬರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟು ಸಮರ್ಥರಾಗಿದ್ದೇವೆ ನಾವು. ಭಾರತದ ವಿವಿಧ ಪಡೆಗಳು ಒಟ್ಟಿಗೇ ಮುನ್ನುಗ್ಗುವ ಕ್ಷಮತೆಯನ್ನು ಇಂದು ಹೊಂದಿವೆ,” ಎಂದು ಪ್ರಧಾನಿ ಆಶ್ವಾಸನೆ ಕೊಟ್ಟಿದ್ದಾರೆ.

“LAC ಉದ್ದಗಲಕ್ಕೂ ನಮ್ಮ ಪಡೆಗಳ ಕಟ್ಟೆಚ್ಚರ ಹೆಚ್ಚಿದಂತೆಲ್ಲಾ, ನಿಗಾ ಇಡುವುದು ಜಾಸ್ತಿಯಾಗುತ್ತದೆ. ಆಗ, ಆ ಪ್ರದೇಶದಲ್ಲಿ ಘಟಿಸುವ ಒಂದೊಂದು ಸಣ್ಣ ಪುಟ್ಟ ಬದಲಾವಣೆಗಳಿಗೂ ಎದುರಾಳಿಗಳನ್ನು ತೀವ್ರವಾಗಿ ಪ್ರಶ್ನಿಸುತ್ತಾರೆ ನಮ್ಮ ಯೋಧರು. ಆಗ ಪ್ರಕ್ಷುಬ್ಧತೆ ಹೆಚ್ಚಾಗುತ್ತದೆ,” ಎಂದು ಪ್ರಧಾನಿ ತಿಳಿಸಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *