Connect with us

ಪ್ರೇಮ ಬರಹ

ಇದು ಅಜ್ಜ-ಅಜ್ಜಿಯ ಇಂಟರೆಸ್ಟಿಂಗ್ ಲವ್ ಸ್ಟೋರಿ…!!!

Published

on

Spread the love

ಪ್ರೀತಿಗೆ ಕಣ್ಣೂ ಇಲ್ಲ. ವಯಸ್ಸಿನ ಬೇಧವೂ ಇಲ್ಲ. ಪ್ರೀತಿ ಎಲ್ಲಿ ಯಾವಾಗ ಬೇಕಾದ್ರು ಹುಟ್ಟಬಹುದು ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದಿವೆ. ಇಂಥದ್ದೇ ಒಂದು ಇಂಟರೆಸ್ಟಿಂಗ್ ಲವ್ ಸ್ಟೋರಿಯನ್ನು ಹೇಳ್ತಿದ್ದೇವೆ ಓದಿ.

ಲಕ್ಷ್ಮಿ ಅಮ್ಮಾಲ್‌ ಹಾಗೂ ಕೋಚಿಯಾನ್‌. ನಮ್ಮ ಇಂದಿನ ಲವ್ ಸ್ಟೋರಿಯ ಹೀರೋ-ಹೀರೋಯಿನ್. ಇವರು ಕೇರಳದ ತಿರುವನಂತಪುರಂನ ನಿವಾಸಿ. 20 ವರ್ಷಗಳ ಬಳಿಕ ವೃದ್ಧಾಶ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ. ಇಬ್ಬರಲ್ಲೂ ಪ್ರೀತಿ ಅಂಕುರಿಸಿದ್ದು, ಈಗ ಮದುವೆಯಾಗುತ್ತಿದ್ದಾರೆ.

ಇಂಟರೆಸ್ಟಿಂಗ್ ವಿಷಯ ಏನಂದ್ರೆ ಇವರಿಬ್ಬರದ್ದು 20 ವರ್ಷಗಳ ಹಳೆ ಪರಿಚಯ. ಲಕ್ಷ್ಮಿ ಅಮ್ಮಾಲ್ ಅವರಿಗೆ 65 ವರ್ಷ, ಕೊಚಾನಿಯನ್‌ಗೆ 66 ವರ್ಷ. ಲಕ್ಷ್ಮಿ ಅವರ ಪತಿ ಕೇಟರಿಂಗ್ ಬಿಸಿನೆಸ್ ಮಾಡ್ತಿದ್ದರು. ಆದ್ರೆ ಅನಾರೋಗ್ಯ ಪೀಡಿತರಾಗಿದ್ದ ಅವರು, 20 ವರ್ಷಗಳ ಹಿಂದೆಯೇ ನಿಧನರಾಗಿದ್ದರು.

ಲಕ್ಷ್ಮಿ ಅಮ್ಮಾಲ್ ಅವರ ಪತಿ ಸಾಯೋಕು ಮುನ್ನ, ತನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಕೊಚಾನಿಯನ್ ರನ್ನು ಕರೆದು ನೀವಿಬ್ಬರೂ ಸದಾ ಖುಷಿಯಾಗಿ ಇರಬೇಕು, ನೀನು ಲಕ್ಷ್ಮಿಯನ್ನು ಚನ್ನಾಗಿ ನೋಡಿಕೋ ಎಂದು ಕೊಚಾನಿಯನ್‌ ಅವರಿಂದ ಭಾಷೆ ಪಡೆದಿದ್ದರಂತೆ. ಅಲ್ಲಿಂದ ಇಬ್ಬರೂ ಒಳ್ಳೇ ಸ್ನೇಹಿತರಾಗಿಯೇ ಇದ್ದರು. ಆದ್ರೆ ತನ್ನ ಕೆಲಸದ ನಿಮಿತ್ತ ಉರೂರು ಅಲೆಯುತ್ತಿದ್ದ ಕೊಚಾನಿಯನ್, ಒಂದು ದಿನ ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಟ್ರು.

ಮಕ್ಕಳು, ಬಂಧುಗಳು ಯಾರೂ ಇಲ್ಲದ ಲಕ್ಷ್ಮಿ ಕೊನೆಗೆ ರಾಮವರ್ಮಾಪುರಂನ ಒದು ವೃದ್ಧಾಶ್ರಮ ಸೇರಿಕೊಂಡ್ರು. ಇತ್ತ, ಕೊಚಾನಿಯನ್ ಅವರಿಗೆ ಫಿಟ್ಸ್ ಖಾಯಿಲೆ ಇದ್ದಿದ್ದರಿಂದ, ಅಂದು ಮನೆಯಿಂದ ಹೊರಟಿದ್ದ ಕೊಚಾನಿಯನ್ ಕೋಜಿಕೋಡ್ ನ ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟಿದ್ದರು. ಯಾರೋ ಎನ್.ಜಿ.ಓ.ದವರು ನೋಡಿ, ಅವರನ್ನು ವಯನಾಡ್ ನ ಒಂದು ವೃದ್ಧಶ್ರಮಕ್ಕೆ ಸೇರಿಸಿದ್ದರು.

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅವರನ್ನು, ಲಕ್ಷ್ಮಿ ಅವರು ಇರೋ ರಾಮವರ್ಮಾಪುರಂನ ಅದೇ ಆಶ್ರಮಕ್ಕೆ ಶಿಫ್ಟ್ ಮಾಡಲಾಗಿತ್ತು. 20 ವರ್ಷಗಳ ಬಳಿಕ ಸಿಕ್ಕ ಇಬ್ಬರೂ ಈ ಹಿಂದೆ ತಮಗೆ ಪರಸ್ಪರ ಇದ್ದ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೊಮ್ಮೆ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೊನೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಸರ್ಕಾರಿ ವೃದ್ಧಾಶ್ರಮದಲ್ಲೇ.. ಮದುವೆಗೆ ಸಿದ್ಧತೆ..!

ಈ ಕ್ಯೂಟ್ ವೃದ್ಧ ಜೋಡಿಯ ಲವ್ ಸ್ಟೋರಿ ಬಗ್ಗೆ ತಿಳಿದ ವೃದ್ಧಾಶ್ರಮದ ಅಧೀಕ್ಷಕರಾದ ʻವಿಜಿ ಜಯಾಕುಮಾರ್‌ ಜೋಕಿʼ ಈ ವೃದ್ಧ ಪ್ರೇಮಿಗಳಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ. ಇದೇ ಡಿಸೆಂಬರ್‌ 31 ರಂದು ಈ ಇವರಿಬ್ಬರ ಮದುವೆ ಕೇರಳದ ತಿರುವನಂತಪುರಂನಲ್ಲಿ ನಡೆಯಲಿದೆ.

ಮದುವೆ ನಂತರವೂ ಈ ವೃದ್ಧ ದಂಪತಿ ವೃದ್ಧಾಶ್ರಮದಲ್ಲೇ ಇರಲಿದ್ದಾರೆ. ಹೀಗೇ ಇನ್ನು 3 ವೃದ್ಧ ದಂಪತಿಗಳು ಈಗಾಗಲೆ ಆಶ್ರಮದಲ್ಲಿ ಇದ್ದಾರಂತೆ. ಇವರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಆಶ್ರಮದವರು ಹೇಳಿದ್ದಾರೆ. ಸರ್ಕಾರ ಕೂಡ ಇಂತಹ ವೃದ್ಧ ದಂಪತಿಗಳಿಗಾಗಿಯೇ ಪ್ರತ್ಯೇಕ ವೃದ್ಧಾಶ್ರಮ ಆರಂಭಿಸಲು ಚಿಂತನೆ ನಡೆಸಿದೆ.

  • ಶ್ರೀಕಾಂತ್ ಶಂಕರಘಟ್ಟ, Karnaataka.in News Desk.