Connect with us

ಪ್ರೇಮ ಬರಹ

ಏ ಮುದ್ದು ಹುಡುಗಿ…ಸಾಯ್ಬೇಕು ಅನ್ನಿಸ್ತಿದೆ… ವಾಪಾಸ್ ಬಾರೇ ಪ್ಲೀಸ್…!

Published

on

Spread the love

ಯಾಕೋ ಇಷ್ಟು ಸತಾಯಿಸ್ತಾ ಇದಿಯ..? ನನ್ನ ದೇವ್ರಾಣೆ ನಾನ್ ನಿಂಗ್ ಮೋಸ ಅಂತೂ ಮಾಡಿಲ್ಲ. ಆ ನಂಬಿಕೆ ನನಗಿದೆ. ನೀನದ್ಯಾಕೆ ಇದ್ದಕ್ಕಿದ್ದ ಹಾಗೇ ಬಿಟ್ಟು ಹೋದೆ ಅಂತ ಅರ್ಥಾನೇ ಆಗ್ತಿಲ್ಲ. ನಿನ್ನೆ ನಿಮ್ಮ ಮನಹತ್ತಿರ ಬಂದಿದ್ದೆ. ನಿಮ್ಮ ಅಪ್ಪ, ಅಣ್ಣ, ಅಮ್ಮ ಎಲ್ಲಾ ಮನೆಯಿಂದ ಒಳಗೆ ಹೊರಗೆ ಓಡಾಡ್ತಿದ್ರು. ಆದ್ರೆ ನೀನ್ ಮಾತ್ರ ಹೊರಗೆ ಬರಲೂ ಇಲ್ಲ, ಒಳಗೆ ಹೋಗಲೂ ಇಲ್ಲ..! ಏನಾಯ್ತು ನಿಂಗೆ..? ಎಲ್ಲಿದಿಯಾ ನೀನು…? ಯಾಕ್ ನನ್ನ ಫೋನ್ ರಿಜೆಕ್ಟ್ ಲೀಸ್ಟಿಗೆ ಹಾಕಿದಿಯ..? ಯಾಕೆ ವಾಟ್ಸಾಪಲ್ಲಿ ಬ್ಲಾಕ್ ಮಾಡಿದಿಯ..? ನಿನ್ನ ಫೇಸ್ ಬುಕ್ ಪ್ರೊಫೈಲ್ ನಂಗೆ ಯಾಕೆ ಕಾಣ್ತಿಲ್ಲ..? ಏನೋ ಯಡವಟ್ಟಾಗಿದೆ… ಆದ್ರೆ ಏನು ಅಂತ ಗೊತ್ತಾಗ್ತಿಲ್ಲ..!

ನೋಡು, ನನ್ನಿಂದ ಏನು ತಪ್ಪಾಗಿದ್ರೂ ನನ್ನ ಕ್ಷಮಿಸಿಬಿಡು. ನಾನ್ ಬೇಕಾದ್ರೆ ನಿನ್ನೆದುರು ಮಂಡಿಯೂರಿ ಕ್ಷಮೆ ಕೇಳ್ತೀನಿ. ನಂಗೆ ನೀನ್ ಬೇಕು. ನಂಗೆ ನಿನ್ ಬಿಟ್ಟು ಇರೋಕೆ ಸಾಧ್ಯಾನೇ ಇಲ್ಲ..! ನೀನ್ ನನ್ನ ತುಂಬಾ ಅಂದ್ರೆ ತುಂಬಾ ಬದಲಾಯ್ಸಿದಿಯ. ಹೊಸ ಬದುಕು ಕೊಟ್ಟಿದಿಯ. ಆದ್ರೆ ಈಗ್ಯಾಕೆ ಈ ಹಠ..!? ಲೈಫಲ್ಲಿ ದೇವಸ್ಥಾನದ ಕಡೆ ಮುಖ ಹಾಕಿ ಮಲಗದೇ ಇದ್ದವನು, ಇವತ್ತು ದಿನಾ ದೇವಸ್ಥಾನಕ್ಕೆ ಹೋಗಿ ಮಾಡಿಟ್ಟಿದಿಯ. ನಮ್ಮಪ್ಪ ನಂಗೆ ಎಷ್ಟ್ ಸಲ ಉಗೀತಿದ್ರು ಗೊತ್ತಾ.? `ಕಟಿಂಗ್ ಮಾಡ್ಸಿಲ್ಲ ಅಂದ್ರೆ ಮನೆಗೆ ಸೇರ್ಸಲ್ಲ’ ಅಂತ… ನಾನವರಿಗೆ ಕ್ಯಾರೇ ಅನ್ನಲಿಲ್ಲ. ಆದ್ರೆ ನೀನ್ ಅವತ್ತು ಹೋಗು ಕತ್ತೆ, ಕಟಿಂಗ್ ಮಾಡ್ಸು ಅಂದ ತಕ್ಷಣ ಹೋಗಿ ನೀಟಾಗಿ ಕಟಿಂಗ್ ಮಾಡ್ಸಿ ನಿನ್ನೆದುರು ನಿಂತಿರಲಿಲ್ವಾ..? ಅಪರೂಪಕ್ಕೆ ಹೊಡೀತಿದ್ದ ಒಂದೋ ಎರಡೋ ಸಿಗರೇಟೂ ಬಿಡಿಸಿಬಿಟ್ಟೆ..! ಆದ್ರೆ ಈಗ ನಾನ್ಯಾರೋ ಗೊತ್ತೇ ಇಲ್ಲ ಅನ್ನೋ ತರ ದೂರ ಆಗ್ಬಿಟ್ಟೆ..! ಇದ್ಯಾವ ನ್ಯಾಯ..?

ನೀನೇ ಯೋಚ್ನೆ ಮಾಡು. ನಾನು ನಿನ್ನ ಹಿಂದೆ ಬಿದ್ದು ಐ ಲವ್ ಯೂ ಅಂದಾಗ ನೀನು ನನ್ನ ಕಾಡಿದ್ದು 6-7 ತಿಂಗಳೂ. ಅಷ್ಟೂ ದಿನ ತಪ್ಪದೇ ನಿನ್ನ ಬೆನ್ನಿಗೆ ಬಿದ್ದು ಲವ್ ಮಾಡಿದ್ದೀನಿ.. ನೀನು ಕರೆದು ಕಪಾಳಕ್ಕೆ ಹೊಡೆದರೂ ಸಹ ಮಾರನೇ ದಿನ ಅಷ್ಟೇ ನಿಯತ್ತಾಗಿ ಮತ್ತೆ ಹಿಂದೆ ಬಂದಿದ್ದೀನಿ..! ನಿಂಗೆ ಅವಾಗ್ಲೇ ಅಲ್ವಾ ಅನ್ಸಿದ್ದು, ` ನಾನು ಅಷ್ಟು ಸುಲಭಕ್ಕೆ ನಿನ್ನ ಬಿಟ್ಟುಕೊಡಲ್ಲ’ ಅಂತ..! ಅವತ್ತು ಕರೆದು `ಏನ್ ನಿಮ್ ಪ್ರಾಬ್ಲಂ’ ಅಂತ ನೀನು ಕೇಳ್ದಾಗ, ನಾನು ಅಷ್ಟೇ ನಿಯತ್ತಾಗಿ `ನೀವು’ ಅಂತ ಮರ್ಯಾದಿ ಕೊಟ್ಟು ಹೇಳಿಲ್ವಾ..? ಅದನ್ನ ಕೇಳಿ ನೀನು ನಗಲಿಲ್ವಾ..? ನಿನ್ ಕಂಡೀಷನ್ನಿಗೆಲ್ಲಾ ನಾನು ಒಪ್ಪಿಕೊಂಡಿಲ್ವ..? ನಾನ್ ನಿಂಗೋಸ್ಕರ ಅಷ್ಟೆಲ್ಲಾ ಮಾಡಿದೀನಿ… ನಾನ್ ನಿನ್ನಿಂದ ಒಂದೇ ಒಂದು ಬದಲಾವಣೆ ಕೇಳಿಲ್ಲ… ಯಾಕಂದ್ರೆ ನಂಗೊತ್ತು… ನೀನು 100% ಪರ್ಫೆಕ್ಟ್ ಅಂತ..! ನಿನ್ನಷ್ಟು ನಾನು ಪರ್ಫೆಕ್ಟ್ ಅಲ್ಲದೇ ಇದ್ರೂ, ಪ್ರಯತ್ನ ಅಂತೂ ಮಾಡ್ತಿದ್ದೀನಿ ತಾನೇ..!

ಇನ್ನೇನು ಪಕ್ಕ ಮ್ಯಾಚಿಂಗ್ ಅನ್ನೋ ಟೈಮಿಗೆ ಹೀಗೆ ಹೇಳ್ದೇಕೇಳ್ದೇ ಬಿಟ್ಟು ಹೋಗ್ತಾರ..? ಪ್ಲೀಸ್ ಕಣ್ಣೊ ಈ ನಿನ್ನ ಕತ್ತೆ ನಿಂಗೋಸ್ಕರ ಕಾಯ್ತಾ ಇದೆ…ನೀನ್ ಮತ್ತೆ ಕಿವಿಹಿಂಡೋದನ್ನು ನಾನು ಅನುಭವಿಸಬೇಕು… ಅಮ್ಮನ ಹಾಗೆ ನನ್ನ ಕೇರ್ ಮಾಡೋದನ್ನ ನಾನು ಮಿಸ್ ಮಾಡ್ಕೋತಾ ಇದ್ದೀನಿ… ನಾನ್ ಯಾವಾಗ್ಲೂ ಐ ಲವ್ ಯೂ ಅಂದಾಗ, ನೀನು `ಐ ಮ್ಯಾರಿ ಯೂ’ ಅಂತಿದ್ದೆ… ಈಗ ಆ ನೆನಪು ಕಾಡ್ತಾ ಇದೆ…

ಅಮ್ಮನ ಹಾಗೆ ಪ್ರೀತ್ಸೋ ಹುಡುಗಿ ಎಲ್ರಿಗೂ ಸಿಗಲ್ಲ.. ನೀನ್ ಸಿಕ್ಕಿದ್ದೆ.. ಈಗ ಏನಾಯ್ತು..? ಬಾರೋ ಬಂಗಾರ… ತುಂಬಾ ಅಳೋಕೆ ಆಗ್ತಿಲ್ಲ..! ನಾನು ನೀನು ಓಡಾಡಿದ ಜಾಗದಲ್ಲಿ ಕೂತಾಗಲೆಲ್ಲಾ ಸಾಯ್ಬೇಕು ಅನ್ನಿಸ್ತಿದೆ… ಆದ್ರೆ ನೀನ್ಯಾವತ್ತೋ ವಾಪಾಸ್ ಬಂದ್ರೆ, ನಾನ್ ಅವಸರದಲ್ಲಿ ಸತ್ತು ಹೋಗ್ಬಿಟ್ರೆ, ನಂಗೇ ನಷ್ಟ ಅಲ್ವಾ..? ಅದಕ್ಕೆ ಸಾಯಲ್ಲ… ಕಾಯ್ತೀನಿ… ಪ್ಲೀಸ್ ಬಾರೋ…ನಂಗಾಗ್ತಿಲ್ಲ… ಪ್ಲೀಸ್….

  • ಪ್ರೇಮ ಸಂಜಾತ