Connect with us

ರಾಜಕೀಯ

ಮಹಾರಾಷ್ಟ್ರದಲ್ಲಿ ಹೇರಿಕೆಯಾಗುತ್ತಾ ರಾಷ್ಟ್ರಪತಿ ಆಡಳಿತ…?

Published

on

Spread the love

ಇನ್ನೂ ಮುಗಿಯದ ಮಹಾಸರ್ಕಾರ ರಚನೆಯ ಕಸರತ್ತು!!!

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಹೈಡ್ರಾಮ ಸದ್ಯಕ್ಕೆ ಮುಗಿಯೋ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಎನ್ ಸಿಪಿ – ಶಿವ ಸೇನೆ ಜೊತೆಗೂಡಿ ಸರ್ಕಾರ ರಚಿಸುತ್ತೆ ಎನ್ನುತ್ತಿರುವಾಗಲೆ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಷ್ಯಾರಿ ಶಿಫಾರಸು ಮಾಡಿದ್ದಾರೆ ಎನ್ನಲಾಗ್ತಿದೆ.

ಭಾನುವಾರವಷ್ಟೆ ಬಿಜೆಪಿ (Single Largest Party) ಮಹಾರಾಷ್ಟ್ರದಲ್ಲಿ ತಾವು ಸರ್ಕಾರ ರಚನೆ ಮಾಡೋದಿಲ್ಲ ಎಂದಿತ್ತು. ನಂತರ ರಾಜ್ಯಪಾಲರು ಶಿವಸೇನೆಗೆ (Second Largest party) ಸರ್ಕಾರ ರಚನೆಗೆ ಆಹ್ವಾನ ನೀಡಿದ್ದರು. ಆದರೆ ನಿಗದಿತ ಸಮಯದೊಳಗೆ ಶಿವಸೇನೆ ಎನ್ ಸಿಪಿ ಮತ್ತು ಕಾಂಗ್ರೆಸ್ ನ ಬೆಂಬಲ ಪತ್ರ ತರಲು ವಿಫಲವಾಗಿತ್ತು. ಶಿವಸೇನೆಗೆ ಮತ್ತಷ್ಟು ಸಮಯಾವಕಾಶ ನೀಡಲು ರಾಜ್ಯಪಾಲರು ನಿರಾಕರಿಸಿದ್ರು. ನಂತರ ಎನ್ ಸಿಪಿಗೆ (Third Largest Party) ಬಹುಮತ ಸಾಬೀತಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿತ್ತು. ಈ ಸಂಬಂಧ ಇವತ್ತು ರಾತ್ರಿ 8:30 ರ ವರೆಗೆ ಕಾಲಾವಕಾಶ ಕೋರಿದ್ದೇವೆ ಎಂದು ಎನ್ ಸಿಪಿಯ ರಾಜ್ಯ ಘಟಕದ ಮುಖ್ಯಸ್ಥ ಜಯಂತ್ ಪಾಟಿಲ್ ಹೇಳಿದ್ರು.

ಈ ಮಧ್ಯೆ ಮಹಾರಾಷ್ಟ್ರದಲ್ಲಿ ಆಗುತ್ತಿರೋ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ನೀಡಿದ್ದಾರೆ ಎನ್ನಲಾಗ್ತಿದೆ. ಹಾಗೂ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದೂ ಹೇಳಲಾಗ್ತಿದೆ. ಇದು ಈಗ ಮಹಾರಾಷ್ಟ್ರದಲ್ಲಿ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

ಎನ್ ಸಿಪಿ ಜೊತೆ ಮಾತನಾಡಲು ಕಾಂಗ್ರೆಸ್ ನ ಅಹ್ಮದ್ ಪಟೇಲ್, ಕೆ.ಸಿ.ವೇಣು ಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಮುಂಬೈಗೆ ದೌಡಾಯಿಸಲಿದ್ದಾರೆ. ಸ್ವತಃ ಸೋನಿಯಾ ಗಾಂಧಿಯವರೇ ಶರದ್ ಪವಾರ್ ಅವರಿಗೆ ಕರೆ ಮಾಡಿ, ಈ ಮೂವರು ಕಾಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಲು ಹೇಳಿದ್ದಾರೆ ಎನ್ನಲಾಗಿದೆ.

  • Karnaataka.in News Desk