Connect with us

ಪ್ರೇಮ ಬರಹ

ಬಿಟ್ಟು ಹೋದವಳಿಗೊಂದು ಪತ್ರ…

Published

on

Spread the love

ನೀನು ನನ್ನ ಬಿಟ್ಟು ಹೋದ ಇಷ್ಟು ದಿನದಲ್ಲಿ ಇವತ್ತು ನಾನು ತುಂಬಾ ಖುಷಿಯಾಗಿದ್ದ ದಿನ… ಯಾಕ್ ಗೊತ್ತಾ.? ನಿನ್ನ ನಾನಿವತ್ತು ನೋಡ್ದೆ… ಎಷ್ಟ್ ಖುಷಿಯಾಗಿ ನಗ್ತಾ ನಿಂತಿದ್ಯಲ್ಲಾ ಬಂಗಾರ… ನನ್ನ ಕಣ್ಣು ತುಂಬಿ ಬಂತು.. ನೀನು ಯಾವತ್ತಿಗೂ ಹಾಗೇ ನಗ್ತಾ ಇರ್ಬೇಕು… ಇವತ್ತು ನಾನು ನಿನ್ನ ನೋಡ್ಬೇಕು ಅಂತ ಅನ್ಕೊಂಡು ಹೊರಟಾಗಲೇ ತಡವಾಗಿತ್ತು… ಆಗಿದ್ದಾಗಲಿ ಅಂತ ಹೊರಟೆ ಬಿಟ್ಟೆ… ಎಲ್ಲಿ ಅಷ್ಟರೊಳಗೆ ನಿನ್ನ ಕಾಲೇಜು ಮುಗಿದು ನೀನು ಮನೆಗೆ ಹೋಗೋ ಬಸ್ ಹತ್ತಿಬಿಡ್ತಿಯೋ ಅನ್ನೋ ಭಯವಿದ್ರೂ, ಇವತ್ತು ನಾನ್ ನಿನ್ನ ನೋಡ್ತೀನಿ ಅನ್ನೋ ಸಣ್ಣ ನಂಬಿಕೆ ಇತ್ತು…

20 ನಿಮಿಷದಲ್ಲಿ ನಿನ್ನ ಕಾಲೇಜ್ ಹತ್ರ ಬಂದಿದೀನಿ… ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ, ಆ ಕಾಫಿ ಕಲರ್ ಚೂಡಿ ಹಾಕ್ಕೊಂಡು ನೀನು ಬರ್ತಾ ಇದ್ರೆ ನನ್ನ ಕಣ್ಣುಗಳಲ್ಲಿ ನೀರು ಹಂಗೆ ತುಂಬಿಕೊಳ್ತಿತ್ತು… ಹತ್ತಿರ ಬಂದು ಮಾತಾಡಿಸಿಬಿಡಬೇಕು ಅನ್ನಿಸ್ತು… ಆದ್ರೆ, ನಾನು ಮಾತಾಡ್ಸಿದ್ದೇ ಹೌದಾದ್ರೆ, ನೀನು ಬೇಜಾರಾಗ್ಬೋದು, ಕಣ್ಣೀರಾಗಬಹುದು.. ನಿನ್ನ ಆ ನಗು ಅಲ್ಲಿಗೇ ನಿಂತು ಹೋಗುತ್ತೆ… ಆ ಕಾರಣಕ್ಕೆ ನಿನ್ನ ಹತ್ರ ಬರಲಿಲ್ಲ… ದೂರದಿಂದಾನೆ ನಿನ್ನ ನೋಡಿ ಸಂತೋಷ ಪಟ್ಟೆ… ಯಾವತ್ತಿಗೂ ನೀನು ಹಂಗೆ ನಗ್ತಾ, ನಗ್ತಾ ಇರ್ಬೇಕು…` ನನ್ನ ನೋವು ನನಗಿರಲಿ, ನೆಮ್ಮದಿ ಸದಾ ನಿನಗಿರಲಿ…’

ನಿಂಗೊತ್ತಾ ನಿನ್ನ ನೋಡೋ ಸಲುವಾಗಿ ನಾನೆಷ್ಟು ಪಾಡು ಪಟ್ಟಿದೀನಿ ಅಂತ? ಅದೆಷ್ಟು ಸಲ ನಿನ್ನ ಕಾಲೇಜಿನ ಆ ಗೇಟು ನನ್ನ ಅಣಕಿಸಿಲ್ಲ ಹೇಳು..? `ಅಯ್ಯೋ ಪಾಪಿ, ಹೋಗೋ ಹೋಗು, ನಿಂಗೆ ಅವಳನ್ನ ನೋಡೋ ಅದೃಷ್ಟ ಇಲ್ಲ ‘ ಅಂತ… ಅವೆಲ್ಲಾ ಅವಮಾನಾನ ನಾನು ಸಹಿಸ್ಕೊಂಡಿರ್ತಿದ್ದಿದ್ದು ಯಾಕ್ ಗೊತ್ತ? ಇವತ್ತು ನಾನ್ ಪಡ್ತಿದೀನಲ್ಲ ಈ ಖುಷಿ, ಇದಕ್ಕೋಸ್ಕರ… ಇವತ್ತು ನಾನು ಆ ಗೇಟಿಗೆ ನನ್ನ ಕಣ್ಣೀರಿನ ಜೊತೆಗೆ, ನಾನು ಗೆದ್ದಿದೀನಿ ಅಂತ ಹೇಳಿ ಬಂದಿದೀನಿ.. ನಾಳೆ ಆ ಗೇಟ್ ದಾಟುವಾಗ ಅದರ ತಲೆ ಮೇಲೆ ಒಂದು ಕುಕ್ಕಿ ಹೋಗು ಪುಟ್ಟ… ನಿನ್ನ ಹುಡುಗನಿಗೇ ರೇಗಿಸೋಷ್ಟು ಕೊಬ್ಬು ಅದಕ್ಕೆ… ಹಹ್ಹಹ್ಹ …

ಪುಟ್ಟ , ನೀನು ನಂಗೆ ನೋಡೋಕೆ ಸಿಕ್ಕಿದ್ದು ಬರಿ 30 ಸೆಕೆಂಡ್ ಮಾತ್ರ.. ಆದ್ರೆ ಅಷ್ಟರೊಳಗೆ ನನ್ನ ಕಣ್ಣಲ್ಲಿ ಇರೋ ಅಷ್ಟೂ ಜಾಗದಲ್ಲಿ ನಿನ್ನ ತುಂಬಿಕೊಂಡು ಬಿಟ್ಟಿದೀನಿ… ನಂಗೊತ್ತು, ನೀನು ನಂಗೆ ಈ ಜನ್ಮದಲ್ಲಿ ಸಿಗೋಲ್ಲ ಅಂತ… ಆದರೂ ನನ್ನ ಪ್ರಯತ್ನ ನಾನು ಮಾಡ್ತಾ ಇರ್ತೀನಿ… ನೋಡಿ ಹಂಗೆ ಹೋಗೋಣ ಅನಿಸ್ತಿತ್ತು, ಆದ್ರೂ ಮನಸ್ಸು ತಡೀಲಿಲ್ಲ… ಅದಕ್ಕೆ ನಿನ್ನ ಮೊಬೈಲಿಗೊಂದು ಮೆಸೇಜ್ ಕಳಿಸ್ಬಿಟ್ಟೆ… sorry, ಬೇಜಾರ್ ಮಾಡ್ಕೋಬೇಡ… ನಿನ್ನಾಣೆ ನಾನು ಇನ್ನು ಒಂದು ತಿಂಗಳೂ ತಲೆ ಹಾಕೋದೇ ಇಲ್ಲ… ನೀನು ಅಷ್ಟೂ ದಿನ ನೆಮ್ಮದಿಯಗಿರಬಹುದು..ಆದ್ರೆ ಅದಾದ ಮೇಲೆ ಒಂದು ದಿನ ಬರ್ತೀನಿ, ಆದ್ರೆ ಹೇಳೋದಿಲ್ಲ… ನಿನ್ನ ನೋಡಿ ಹಾಗೇ ಹೋಗಿಬಿಡ್ತೀನಿ…
ನಾನ್ ಬರೋದು ನನಗೋಸ್ಕರ ಅಲ್ಲ, ನನ್ನ ಹೃದಯಕ್ಕೋಸ್ಕರ.. ಎಷ್ಟೇ ಆಗ್ಲಿ ಒಂದು ಕಾಲದಲ್ಲಿ ದಿನಕ್ಕೆ ನೂರಾರು ಮೆಸೇಜ್ ಕಳಿಸ್ತಿದ್ದಿದ್ದು ಅದೇ ಹೃದಯಕ್ಕೇ ಅಲ್ವಾ..? ಹ್ಹಾ ಮತ್ತೊಂದು ವಿಷ್ಯ… i love you ಕಣೆ ಪುಟ್ಟಾ… ಯಾವತ್ತಿಗೂ…

  •  ಪ್ರೇಮ ಸಂಜಾತ

Continue Reading
2 Comments

2 Comments

  1. Venkatesh

    November 4, 2019 at 8:05 am

    Beautiful heart touching story

  2. fancy style text

    January 20, 2020 at 11:48 pm

    Great blog here! Also your site loads up very fast!
    What web host are you using? Can I get your affiliate link to your host?
    I wish my website loaded up as quickly as yours lol

Leave a Reply

Your email address will not be published. Required fields are marked *