Connect with us

ಒಳ್ಳೆ ವಿಷ್ಯ

ಲಾಟರಿ ಟಿಕೆಟ್ ಹೇಗೆ ಗೆಲ್ಲಬಹುದು..? ಒಂದೊಳ್ಳೆ ಸ್ಟೋರಿ…

Published

on

Spread the love

ಗೆಳೆಯರಿಬ್ಬರು ರಸ್ತೆಯಲಿ ಹೋಗ್ತಿದ್ರು. ಯಾವ್ಯಾವುದೋ ವಿಷಯದ ಮಾತುಕತೆ ನಡೀತಾ ಇತ್ತು. ರಸ್ತೆಯ ಆ ತುದಿಯಲ್ಲಿ ಅಜ್ಜಿಯೊಬ್ಬರು ಲಾಟರಿ ಟಿಕೆಟ್ ಮಾರುತ್ತಾ ಇರೋದು ಇಬ್ಬರಲ್ಲಿ ಒಬ್ಬನ ಕಣ್ಣಿಗೆ ಬೀಳುತ್ತೆ. ಅವನು ತನ್ನ ಗೆಳೆಯನನ್ನು ಕರೀತಾನೆ, ಬಾ ಹೋಗಿ ಲಾಟರಿ ಟಿಕೆಟ್ ತಗೊಳೋಣ ಅಂತ…

ಆದ್ರೆ ಅವನ ಫ್ರೆಂಡ್ ಅದಕ್ಕೆ ಸುತಾರಾಮ್ ಒಪ್ಪೋದೇ ಇಲ್ಲ. `ನಿಂಗ್ಯಾಕೆ ಮ್ಹರಾಯ ಈ ಹುಚ್ಚು, ಅದು ಲಕ್ಷಕ್ಕೆ ಒಬ್ಬರಿಗೆ ಬರುತ್ತಷ್ಟೆ. ಗೆಲ್ಲೋ ಚಾನ್ಸಸ್ ತುಂಬಾ ಕಮ್ಮಿ’ ಅಂತ.. ಆದ್ರೂ ಇನ್ನೊಬ್ಬ ಗೆಳೆಯ ತನ್ನ ಹಠ ಬಿಡದೆ ಅವನನ್ನು ಆ ಅಜ್ಜಿಯ ಬಳಿ ಕರೆದುಕೊಂಡು ಹೋಗ್ತಾನೆ. ಅಜ್ಜಿಯಿಂದ ಐದು ಲಾಟರಿ ಟಿಕೆಟ್ ಖರೀದಿ ಮಾಡ್ತಾನೆ.


ಇನ್ನೊಬ್ಬ ಗೆಳೆಯನಿಗೆ ಕೋಪ ಬರುತ್ತೆ. `ನಿಂಗೆ ಅಷ್ಟು ಹೇಳಿದ್ರೂ ಗೊತ್ತಾಗಲ್ವಾ..? ಏನಿವಾಗ ತಗೊಂಡ್ ತಕ್ಷಣ ನಾಳೆ ನೀನು ಕೋಟ್ಯಾಧಿಪತಿ ಆಗ್ಬಿಡ್ತೀಯ, ಸುಮ್ನೆ ದುಡ್ಡು ದಂಡ’ ಅಂತ ಅವನಿಗೆ ಬಯ್ತಾನೆ. ಆಗ ಅವನ ಗೆಳೆಯ ಅಷ್ಟೇ ಕೂಲಾಗಿ ಉತ್ತರ ಕೊಡ್ತಾನೆ. `ನೋಡು ಗೆಳೆಯ, ನಾನು ವ್ಯಯಿಸಿದ್ದು ಬರೀ 50 ರೂಪಾಯಿ. ಅದು ನಿನ್ನ 2-3 ಸಿಗರೇಟಿನ ಬೆಲೆ. ಆದ್ರೆ ನನಗೆ ಗೆಲ್ಲುವ ಸಾಧ್ಯತೆ ಇರೋದು ಒಂದು ಕೋಟಿ. ಕನಿಷ್ಟ ನಾನು ಟಿಕೆಟ್ ಖರೀದಿರೋ ಕಾರಣಕ್ಕೆ, ನಾನು ಗೆಲ್ಲಬಹುದಾದವರ ರೇಸಿನಲ್ಲಿದ್ದೇನೆ. ನೀನು ಖರೀದಿಸಿಯೂ ಇಲ್ಲ, ನಿನಗೆ ಆ ನಿರೀಕ್ಷೆಯೂ ಇಲ್ಲ’ ಅಂತ…


ಇದರ ಅರ್ಥ ಏನಪ್ಪಾ ಅಂದ್ರೆ, ನಾವು ಪ್ರಯತ್ನವೇ ಪಡದೇ ನಮಗೆ ಎಲ್ಲವೂ ಸಿಗಬೇಕು ಅಂದ್ರೆ ಹೇಗೆ..? ಮೊದಲು ನಾವು ಶ್ರಮ ಪಡಬೇಕು, ಪ್ರಯತ್ನ ಪಡಬೇಕು. ಅದೇ ಲಾಟರಿ ಟಿಕೆಟ್… ಅದರಿಂದ ಸಿಗುವ ಪ್ರತಿಫಲವೇ ಬಂಪರ್ ಬಹುಮಾನ… ಲಾಟರಿ ಟಿಕೆಟ್ ತೆಗೆದುಕೊಳ್ಳದೇ ಬಂಪರ್ ಬಹುಮಾನ ನಿರೀಕ್ಷಿಸಬಾರದು, ಶ್ರಮ ಹಾಕದೇ ಯಶಸ್ಸು ನಿರೀಕ್ಷಿಸಬಾರದು… ಶುಭವಾಗಲಿ…

-ಕಿರಿಕ್ ಕೀರ್ತಿ