Connect with us

ಐತ್ ಲಗಾ

ಕೂಲಿ ಕಾರ್ಮಿಕನೊಬ್ಬ ದಿಢೀರ್ ಕೋಟ್ಯಾಧಿಪತಿಯಾಗಿದ್ದು ಹೇಗೆ…!!!?

Published

on

Spread the love

ಅದೃಷ್ಟ ಅನ್ನೊದೇ ಹಾಗೆ ನಾವು ತೆಗೆದುಕೊಳ್ಳುವ ಕ್ಷಣ ಮಾತ್ರದ ನಿರ್ಧಾರಗಳು ಕೆಲವೊಮ್ಮೆ ನಮ್ಮ ಅರಿವಿಗೂ ಬಾರದಂತೆ ಬದುಕಿನ ಪಥವನ್ನೇ ಬದಲಾಯಿಸಿ ಬಿಡತ್ತವೆ. ಅದೃಷ್ಟವೊಂದಿದ್ದರೆ ಕೂಲಿ ಮಾಡೋನೂ ಕುಬೇರನಾಗಬಲ್ಲ. ಅವಕಾಶಗಳಿಗಾಗಿ ಅಲೆಯುತ್ತಿದ್ದವನು ಮುಂದೊಂದು ದಿನ ಸ್ಟಾರ್ ಆಗಿ ಮೆರೆಯಬಲ್ಲ. ಹೀಗೆ ಹೊತ್ತಿನೂಟಕ್ಕೆ ಪರದಾಡುತ್ತಿದ್ದವರು ಬೆಳಗಾಗುವುದರೊಳಗೆ ಕೋಟಿ ಕುಳಗಳಾದ ಕತೆಗಳು ಸಾಕಷ್ಟಿವೆ. ಇದಕ್ಕೊಂದು ತಾಜಾ ಉದಾಹರಣೆ ಕೇರಳದಲ್ಲಿ ಸಿಕ್ಕಿದೆ. ಇಲ್ಲಿನ ಕೂಲಿ ಕಾರ್ಮಿಕರೊಬ್ಬರು ದಿಢೀರ್ ಕೋಟ್ಯಾಧಿಪತಿಯಾದ ಕತೆ ಹೇಳ್ತೀನಿ ಕೇಳಿ ಬಿಡಿ.

 

ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಬಡ ಕೂಲಿ ಕಾರ್ಮಿಕ ಇದೀಗ ಬರೋಬ್ಬರಿ 12 ಕೋಟಿ ರೂ.ಗಳ ಒಡೆಯನಾಗಿದ್ದಾರೆ. ಹೌದು, ಕೇರಳದ ಕಣ್ಣೂರಿನ ಪೊರುಣ್ಣನ್ ರಾಜನ್ ಎಂಬ ಸಾಮಾನ್ಯ ಕಾರ್ಮಿಕ ಎಲ್ಲರಂತೆ ಆಸೆಪಟ್ಟು ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಹಲವು ಪ್ರಯತ್ನಗಳ ನಂತರ ಒಂದೊಮ್ಮೆ 2 ಸಾವಿರ ರೂಪಾಯಿಗಳ ಲಾಟರಿ ಪಡೆದುಕೊಂಡಿದ್ದರು. ಇದಾದ ಬಳಿಕ ರಾಜನ್‍ಗೆ ಲಾಟರಿ ಮೇಲಿದ್ದ ವ್ಯಾಮೋಹ ಹೆಚ್ಚಿತ್ತು, ಒಂದಲ್ಲ ಒಂದು ದಿನ ಲಾಟರಿ ಹೊಡೆಯಬಹುದು ಎಂಬ ಭರವಸೆ ಹೊಂದಿದ್ದ ರಾಜನ್ ಸಾಧ್ಯವಾದಾಗಲೆಲ್ಲ ಲಾಟರಿ ಟಿಕೆಟ್ ಖರೀದಿಸಿ ಅದೃಷ್ಟ ಪರೀಕ್ಷೆಗೆ ಸಜ್ಜಾಗುತ್ತಿದ್ದರು.

ಇತ್ತೀಚೆಗೆ ಕೈ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ರಾಜನ್. ತಾವು ಮಾಡಿಕೊಂಡಿದ್ದ ಸಾಲವನ್ನು ಮರು ಪಾವತಿಸಲು ಲೋನ್ ಕೇಳಿಕೊಂಡು ಮೂರು ವಾರಗಳ ಹಿಂದೆ ಬ್ಯಾಂಕ್ ಒಂದಕ್ಕೆ ಭೇಟಿ ನೀಡಿ ಮನೆಗೆ ಹಿಂತಿರುಗುತ್ತಿದ್ದ ರಾಜನ್. ದಾರಿಯಲ್ಲಿ ಕಂಡ ಪಯ್ಯನ್ ಏಜೆನ್ಸಿಗೆ ತೆರಳಿ 300 ರೂ.ಗಳ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇನ್ನು ಲಾಟರಿ ಎಂದರೇ ಮುನಿಸಿಕೊಳ್ಳುತ್ತಿದ್ದ ಮಡದಿ ಮತ್ತು ಮನೆಯವರಿಗೆ ತಾವು ಟಿಕೆಟ್ ಖರೀದಿ ಮಾಡಿರುವುದನ್ನು ತಿಳಿಸದೆ ರಾಜನ್ ಗೌಪ್ಯವಾಗಿಟ್ಟಿದ್ದರು.

ಒಮ್ಮೆಯಾದರೂ ದೊಡ್ಡ ಮೊತ್ತದ ಲಾಟರಿ ಹೊಡೆಯಬಹುದು ಎಂಬ ಕನಸು ಕಾಣುತ್ತಲೇ ಪ್ರತಿ ಬಾರಿ ನಿದ್ದೆಗೆ ಜಾರುತ್ತಿದ್ದ ರಾಜನ್, ಬೆಳಗೆದ್ದು ಪೇಪರ್ ಓದುವುದನ್ನು ಮರೆಯುತ್ತಿರಲಿಲ್ಲ. ಎಂದಿನಂತೆ ಕಳೆದ ಸೋಮವಾರ ಕೂಡ ಪೇಪರ್ ಹಿಡಿದು ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಬಂಪರ್ ಲಾಟರಿ ನಂಬರ್ ನೋಡುತ್ತಿದ್ದ ರಾಜನ್ ಅರೇ ಕ್ಷಣ ಶಾಕ್‍ಗೆ ಒಳಗಾಗಿದ್ದರು. ನೋಡ ನೋಡುತ್ತಲೇ ರಾಜನ್ ಬಳಿ ಇದ್ದ ಟಿಕೆಟ್‍ಗೆ ಬರೋಬ್ಬರಿ 12 ಕೋಟಿ ರೂ.ಗಳ ಲಾಟರಿ ಹೊಡೆದು ಬಿಟ್ಟಿತ್ತು. ಸತತ ಪ್ರಯತ್ನಗಳ ನಂತರ ಕೊನೆಗೂ ಅದೃಷ್ಟ ಲಕ್ಷ್ಮಿ ರಾಜನ್ ಪಾಲಾಗಿದ್ದಳು.

ತಮಗೆ 12 ಕೋಟಿ ರೂ.ಗಳ ಲಾಟರಿ ಹೊಡೆದಿದೆ ಎಂಬ ಅಚ್ಚರಿಯನ್ನು ಅರಗಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ ಎನ್ನುವ ರಾಜನ್, ಈ ಭಾರೀ ಮೊತ್ತವನ್ನು ತಮ್ಮ ಮಕ್ಕಳ ಓದು ಹಾಗೂ ಭವಿಷ್ಯಕ್ಕಾಗಿ ಸದುಪಯೋಗ ಪಡಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಕೆಲ ವಾರಗಳ ಹಿಂದಷ್ಟೇ ಸಾಲ ಕೇಳಿಕೊಂಡು ಅಲೆದಾಡುತ್ತಿದ್ದ ಸಾಮಾನ್ಯ ಕೂಲಿ ಕಾರ್ಮಿಕರೊಬ್ಬರು ಇದೀಗ 12 ಕೋಟಿ ರೂ.ಗಳ ಒಡೆಯನಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
– ಸಂಕೇತ್, Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *