Connect with us

ರಾಜಕೀಯ

ಅನರ್ಹರು…ಅನರ್ಹರೇ…! ಆದ್ರೆ ಒಂದು ಅವಕಾಶ ಇದೆ…!

Published

on

Spread the love

ಸುಪ್ರೀಂ ಕೋರ್ಟ್ ಮೆಟ್ಟಿಲಲ್ಲಿದ್ದ ಅನರ್ಹರ ರಾಜೀನಾಮೆ ವಿಚಾರದ ತೀರ್ಪು ಹೊರಬಿದ್ದಿದ್ದು. ಸ್ಪೀಕರ್ ಆದೇಶವನ್ನು ಸುಪ್ರೀಮ್ ಕೋರ್ಟ್ ಎತ್ತಿಹಿಡಿದಿದೆ..! ಆದ್ರೆ ಆನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು. ಅಲ್ಲಿ ಗೆದ್ದರೆ ಮತ್ತೆ ಮಂತ್ರಿಯಾಗಬಹುದು ಎಂಬ ತೀರ್ಪು ಕೊಟ್ಟಿದೆ… ಹಾಗೆಯೇ ಅನರ್ಹತೆಗೆ ಸ್ಪೀಕರ್ ವಿಧಿಸಿದ್ದ ಅವಧಿಯನ್ನು ಸಹ ಸುಪ್ರೀಂ ಕೋರ್ಟ್ ರದ್ದು ಮಾಡಿದೆ.


ನ್ಯಾ. ವಿ.ರಮಣ ನೇತೃತ್ವದ ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ ಸ್ಪೀಕರ್ ಆದೇಶ ಎತ್ತಿ ಹಿಡಿದಿದೆ. 17 ಶಾಸಕರನ್ನು ಅನರ್ಹರೆಂದು ತೀರ್ಪು ನೀಡಿದೆ. ಆದರೆ ಡಿಸೆಂಬರ್ 5 ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದೆ…

ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಜುಲೈನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಸೇರಿದ 17 ಶಾಸಕರು ರಾಜೀನಾಮೆ ನೀಡಿದ್ದರು. ಅದರಲ್ಲಿ ಕೆಲವರು ಅನಾರೋಗ್ಯದ ನೆಪವೊಡ್ಡಿ ವಿಶ್ವಾಸಮತ ಯಾಚಿಸುವ ವೇಳೆ ಗೈರು ಹಾಜರಾಗಿದ್ರು. ಆದರೆ ಈ ಶಾಸಕರ ಮೇಲೆ ಆಯಾ ಪಕ್ಷಗಳ ನಾಯಕರು ನೀಡಿದ ಅನರ್ಹತೆಯ ದೂರನ್ನು ಪರಿಗಣಿಸಿದ ಸ್ಪೀಕರ್ ಇವರನ್ನು ಪ್ರಸಕ್ತ ವಿಧಾನಸಭಾ ಅವಧಿ ಮುಗಿಯುವವರೆಗೆ, ಅಂದರೆ 2023ರ ತನಕ ವಿಧಾನಸಭೆಯಿಂದ ಅನರ್ಹಗೊಳಿಸಿದ್ದರು.

ಯಾರೆಲ್ಲಾ ಅನರ್ಹರು..?

ಹುಣಸೂರು – ಜೆಡಿಎಸ್ – ವಿಶ್ವನಾಥ್
ಪ್ರತಾಪ್ ಗೌಡ ಪಾಟೀಲ್, ಮಸ್ಕಿ – ಕಾಂಗ್ರೆಸ್
ಶಿವರಾಂ ಹೆಬ್ಬಾರ್, ಯಲ್ಲಾಪುರ – ಕಾಂಗ್ರೆಸ್
ನಾರಾಯಣಗೌಡ, ಕೆಆರ್.ಪೇಟೆ – ಜೆಡಿಎಸ್
ರಮೇಶ್ ಜಾರಕಿಹೊಳಿ, ಗೋಕಾಕ್ – ಕಾಂಗ್ರೆಸ್
ಮಹೇಶ್ ಕುಮಟಳ್ಳಿ, ಅಥಣಿ – ಕಾಂಗ್ರೆಸ್
ರೋಷನ್ ಬೇಗ್, ಶಿವಾಜಿನಗರ – ಕಾಂಗ್ರೆಸ್
ಎಂಟಿಬಿ ನಾಗರಾಜ್, ಹೊಸಕೋಟೆ – ಕಾಂಗ್ರೆಸ್
ಸುಧಾಕರ್, ಚಿಕ್ಕಬಳ್ಳಾಪುರ – ಕಾಂಗ್ರೆಸ್
ಶ್ರೀಮಂತ್ ಪಾಟೀಲ್, ಕಾಗವಾಡ – ಜೆಡಿಎಸ್…
ಶಂಕರ್, ರಾಣೆಬೆನ್ನೂರು – ಕೆಪಿಜೆಪಿ
ಆನಂದ್ ಸಿಂಗ್, ಹೊಸಪೇಟೆ – ಕಾಂಗ್ರೆಸ್,
ಎಸ್.ಟಿ. ಸೋಮಶೇಖರ್, ಯಶವಂತಪುರ – ಕಾಂಗ್ರೆಸ್
ಗೋಪಾಲಯ್ಯ, ಮಹಾಲಕ್ಷ್ಮಿ ಲೇಔಟ್ – ಜೆಡಿಎಸ್
ಭೈರತಿ ಬಸವರಾಜ್, ಕೆ.ಆರ್.ಪುರಂ – ಕಾಂಗ್ರೆಸ್
ಮುನಿರತ್ನ, ಆರ್.ಆರ್.ನಗರ – ಕಾಂಗ್ರೆಸ್
ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದ್ದು, ಅನರ್ಹರ ಭವಿಷ್ಯ ನಿರ್ಧಾರವಾಗಲಿದೆ.

Continue Reading
Click to comment

Leave a Reply

Your email address will not be published. Required fields are marked *