Connect with us

ಒಳ್ಳೆ ವಿಷ್ಯ

ಕೊಲೆ ಅಪರಾಧಿ 14 ವರ್ಷ ಜೈಲಲ್ಲಿದ್ದು, ವೈದ್ಯನಾದ ರೋಚಕ ಕತೆ..!!!

Published

on

Spread the love

ಯಾವುದೋ ಗಳಿಗೆಯಲ್ಲಿ ಆತುರಕ್ಕೆ ಬಿದ್ದು ಅಪರಾಧ ಎಸಗಿ, ಜೈಲು ಪಾಲಾಗುವ ಅನೇಕರು ಶಿಕ್ಷೆಯ ಅವಧಿ ಮುಗಿದ ನಂತರವೂ ಹಳೆ ಚಾಳಿಯನ್ನೇ ಮುಂದುವರೆಸಿ ಕೊಲೆ, ಸುಲಿಗೆ ದರೋಡೆಗೆ ಸೀಮಿತವಾಗಿ ಬಿಡುತ್ತಾರೆ. ಕೆಲವರಿಗಂತೂ ಅಪರಾಧ ದಂಧೆಯಾಗಿ ಮಾರ್ಪಾಡಾಗಿದೆ. ಬಂಧಿಖಾನೆಗಳು ಪುಂಡ ಪೋಕರಿಗಳ ಜನ್ಮಸ್ಥಳವಾಗಿ ಬದಲಾಗಿ ಬಿಟ್ಟಿವೆ.

“ಜೈಲು ಹಾಗೂ ಶಿಕ್ಷೆ” ಎಂಬ ಎರಡು ಪದಗಳ ವ್ಯಾಖ್ಯಾನವೇ ಬದಲಾದ ಈ ಕಾಲಘಟ್ಟದಲ್ಲಿ, ಇಲ್ಲೊಬ್ಬ ವ್ಯಕ್ತಿ ತಾನು ಮಾಡಿದ ತಪ್ಪಿಗೆ 14 ವರ್ಷಗಳ ಸರೆವಾಸ ಅನುಭವಿಸಿದ ನಂತರ ಇದೀಗ ವೈದ್ಯರಾಗಿ ಹೊಸ ಬದುಕು ಕಟ್ಟಿಕೊಳ್ಳಲು ಸಜ್ಜಾಗಿದ್ದಾರೆ. ಜೈಲು ಶಿಕ್ಷೆಯ ಬಳಿಕ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಇದೀಗ ಡಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿರುವ ಕಲಬುರಗಿಯ ಸುಭಾಷ್ ಪಾಟೀಲ್ ಬದುಕಿನ ಕತೆ ಯಾವ ಸಿನಿಮಾ ಸ್ಟೋರಿಗೂ ಕಮ್ಮಿ ಇಲ್ಲ.

ಅಫಜಲಪುರ ತಾಲೂಕಿನ ಬೋಸಾಗ ಗ್ರಾಮದವರಾದ ಸುಭಾಷ್, ಈ ಹಿಂದೆ 2002ರಲ್ಲಿ ಕೊಲೆ ಅಪರಾಧದಲ್ಲಿ ಜೈಲು ಪಾಲಾಗಿದ್ದರು. ಬಾಲ್ಯದಿಂದಲೂ ವೈದ್ಯನಾಗಬೇಕೆಂದು ಕನಸು ಕಂಡಿದ್ದ ಸುಭಾಷ್ ಪಿಯುಸಿ ಮುಗಿದ ನಂತರ, 1998 ರÀಲ್ಲಿ ಮಹಾದೇವಪ್ಪಾ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು.

ವೈದ್ಯನಾಗಬೇಕಿದ್ದವ ಜೈಲು ಸೇರಿದ್ದು ಹೇಗೆ…!!!?

ಸುಭಾಷ್ ದ್ವಿತೀಯ ವರ್ಷದ ಮೆಡಿಕಲ್‍ಗೆ ಕಾಲಿಡುವ ಹೊತ್ತಿಗೆ ಪಕ್ಕದ ಮನೆಯ ಅಬಕಾರಿ ಗುತ್ತಿಗೆದಾರ ಅಶೋಕ್ ಅವರ ಪತ್ನಿಯ ಪರಿಚಯವಾಗಿ, ದಿನಗಳೆದಂತೆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಆದರೆ ಅಶೋಕ್ ಏಕಾಏಕಿ ಮನೆ ಬದಲಾಯಿಸಿ ಪತ್ನಿ ಸಮೇತವಾಗಿ ಬೆಂಗಳೂರಿಗೆ ಹೊರಟು ಹೋಗಿದ್ದರು. ಇಬ್ಬರ ನಡುವಿನ ಅಂತರ ಹೆಚ್ಚಿದಷ್ಟು ಹತ್ತಿರಾಗಲು ಒದ್ದಾಡುವ ಸುಭಾಷ್ ಮತ್ತು ಪ್ರೇಯಸಿ ತಮ್ಮ ಪ್ರೀತಿಯ ಉಳಿವಿಗಾಗಿ ಅಶೋಕ್ (ಪ್ರೇಯಸಿಯ ಗಂಡ) ನನ್ನೇ ಗುಂಡಿಟ್ಟು ಕೊಲೆ ಮಾಡಿದ್ದರು.

ಆಗಿನ ಕಾಲಕ್ಕೆ ಈ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿತ್ತು. ತನಿಖೆಯ ನಂತರ ಇಬ್ಬರ ಅಪರಾಧವನ್ನು ಪರಿಗಣಿಸಿ ನ್ಯಾಯಾಲಾಯ ಜೀವಾವದಿ ಶಿಕ್ಷೆಯನ್ನು ವಿಧಿಸಿತ್ತು. ಇದಾದ ನಂತರ ಪರಪ್ಪನ ಅಗ್ರಹಾರ ಹಾಗೂ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿ ತಲಾ 7 ವರ್ಷಗಳಂತೆ 14 ವರ್ಷಗಳ ಸೆರೆವಾಸ ಅನುಭವಿಸಿ, ಸನ್ನಢತೆಯ ಆಧಾರದ ಮೇಲೆ 2016ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಿದ್ದರು.

ಜೈಲಿನಲ್ಲೇ ಮುಗಿಸಿದರು ಪದವಿ…!!!

ಜೈಲಿನಲ್ಲಿರುವಾಗಲೇ ಮೈಸೂರು ಮುಕ್ತ ವಿವಿಯಿಂದ ಪತ್ರಿಕೋದ್ಯಮದ ಪದವಿ ಪಡೆದಿದ್ದ ಸುಭಾಷ್ ಮತ್ತು ಪ್ರೇಯಸಿ. ಜೈಲಿಂದ ಹೊರಬಂದ ನಂತರ ವ್ಯವಸಾಯದಲ್ಲಿ ತೊಡಗಿಕೊಳ್ಳುವ ನಿರ್ಧಾರ ಮಾಡಿದ್ದರು. ಆದರೆ ಅರ್ಧಕ್ಕೆ ನಿಲ್ಲಿಸಿದ್ದ ಮೆಡಿಕಲ್ ವ್ಯಾಸಂಗವನ್ನು ಮುಂದುವರೆಸಲು 2017ರಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯಿಂದ ಅನುಮತಿ ದೊರೆತಾಗ, ತಡ ಮಾಡದೆ ಮರು ದಾಖಲಾತಿ ಪಡೆಯುವ ಸುಭಾಷ್ 2019 ರ ಹೊತ್ತಿಗೆ ಎಮ್‍ಬಿಬಿಎಸ್ ಪದವಿ ಮುಗಿಸಿ ಡಾ. ಸುಭಾಷ್ ಪಾಟೀಲ್ ಆಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಆತುರದ ನಿರ್ಧಾರಕ್ಕೆ ಬದುಕಿನ ಅಮೂಲ್ಯ ಕ್ಷಣಗಳನ್ನೇ ಬಲಿಯಾಗಿಸಿಕೊಂಡ ಸುಭಾಷ್ ಪುಟ್ಟ ಕ್ಲಿನಿಕ್ ತೆರೆದು ಬಡವರಿಗೆ, ನಿರ್ಗತಿಕರಿಗೆ ಸೈನಿಕರ ಮತ್ತು ಪೋಲಿಸರ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಸಂಕೇತ್, Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *