Connect with us

ಸಿನಿ ಸುದ್ದಿ

‘ಹುಡ್ಗಿ ಬೇಕಾ’ ಅಂದ ಆಂಥೋನಿ ದಾಸ್ ಗೆ “ಕಾಲವೇ ಮೋಸಗಾರ”ನಂತೆ…!!!

Published

on

Spread the love

ಅಪ್ಪಟ ಹೊಸ ಪ್ರತಿಭೆಗಳು ಸೇರಿ ಮಾಡಿರೊ ಹೊಸ ಚಿತ್ರ,

ಕಾಲವೇ ಮೋಸಗಾರ. ಇದೊಂದು ಪಕ್ಕಾ ಕಮರ್ಷಿಯಲ್ ಪ್ರಯೋಗ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂನಲ್ಲಿ ಏಕಕಾಲದಲ್ಲಿ ತಯಾರಾಗಿರೋ ಸಿನಿಮಾ. ಈಗಾಗ್ಲೇ ಟೀಸರ್ ನಿಂದ ಸುದ್ದಿ ಮಾಡಿದ್ದ ಈ ಚಿತ್ರ, ಈಗ ಮತ್ತೊಮ್ಮೆ ಸೌಂಡ್ ಮಾಡ್ತಿದೆ.

ಹುಡ್ಗಿ ಬೇಕಾ, ಬಾಟಲ್ ಬೇಕಾ..? ಕಾಲವನೇ ಮೋಸಗಾರ ಚಿತ್ರದ ಈ ಹಾಡು ಹಾಡಿರೋರು ಟಗರು ಫೇಮ್ ನ ಆಂಥೋನಿ‌ದಾಸ್. ಇತ್ತೀಚೆಗಷ್ಟೇ ರಿಲೀಸ್ ಆಗಿರೋ ಹುಡುಗಿ ಬೇಕಾ, ಬಾಟಲ್ ಬೇಕಾ ಹಾಡು, ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಇದೊಂದು
ಔಟ್ ಅಂಡ್ ಔಟ್ ಮಾಸ್ ಮಸಾಲ ಸಾಂಗ್.

 

ಈ ಸಾಂಗ್ ಸದ್ಯ ಫಡ್ಡೆ ಹುಡುಗರಿಗೆ ಸಖತ್ ಕಿಕ್ ಕೊಡ್ತಿದೆ. ಅಂದ್ಹಾಗೆ ಹುಡ್ಗಿ ಬೇಕಾ, ಬಾಟಲ್ ಬೇಕಾ ಹಾಡನ್ಮು ಬರೆದಿರೋರು ನಿರ್ದೇಶಕ ಸಂಜಯ್. ಭಾವಸ್ಪಂದನ ಪ್ರೊಡಕ್ಷನ್ಸ್ ಮತ್ತು ಬಿ.ಎಂ.ಡಬ್ಲ್ಯೂ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರೋ ‘ಮೋಸಗಾರ’ನಿಗೆ ಬಂಡವಾಳ ಹೂಡಿರೋರು ರಜತ್ ದುಗ್ಗೋಜಿ.

ಸಂಜಯ್ ವದತ್ ಎಸ್ ನಿರ್ದೇಶನ, ಕೆ.ಲೋಕೇಶ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್.


• Karnaataka.in Cine Desk.

Continue Reading
Click to comment

Leave a Reply

Your email address will not be published. Required fields are marked *