Connect with us

ಏನ್ ಸುದ್ದಿ?

ಜುಲೈ ಅಂತ್ಯಕ್ಕೆ ಬರಲಿವೆ ನಾಲ್ಕು ರಫೇಲ್‌ಗಳು

Published

on

Spread the love

 

ಚೀನಾ ಹಾಗೂ ಪಾಕಿಸ್ತಾನಗಳ ನಡುವೆ ಕಾಶ್ಮೀರದಲ್ಲಿ ಬಹಳ ಪ್ರಕ್ಷುಬ್ಧ ವಾತಾವರಣವನ್ನು ಎದುರಿಸುತ್ತಿರುವ ಭಾರತದ ವಾಯುಪಡೆಗೆ ಬಲ ತುಂಬಲು ಮುಂದಿನ ತಿಂಗಳ ಅಂತ್ಯದ ವೇಳೇಗೆ ನಾಲ್ಕು ರಫೇಲ್ ಫೈಟರ್‌ ಜೆಟ್‌ಗಳು ಅಂಬಾಲಾದಲ್ಲಿರುವ ಭಾರತೀಯ ವಾಯುಪಡೆಯ ನೆಲೆಗೆ ಬಂದಿಳಿಯಲಿವೆ.

ಭಾರತಕ್ಕೆ 36 ರಫೇಲ್‌ಗಳನ್ನು ಪೂರೈಸಲು ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‌ಗೆ, ಕೋವಿಡ್-19 ಲಾಕ್‌ಡೌನ್ ಕಾರಣದಿಂದ ಫೈಟರ್‌ ಜೆಟ್‌ಗಳ ರವಾನೆ ಮಾಡುವುದು ಸ್ವಲ್ಪ ತಡವಾಗಿದೆ.

17 Golden Arrows ಸ್ಕ್ವಾಡರ್ನ್ ದೇಶದ ಮೊದಲ ರಫೇಲ್ ಯುದ್ಧವಿಮಾನವನ್ನು ಚಾಲನೆ ಮಾಡುವ ಗೌರವ ಪಡೆದುಕೊಂಡಿದೆ.

ಇದೇ ವೇಳೆ, ರಫೇಲ್ ಚಾಲನೆ ಮಾಡಲು ತರಬೇತಿ ಪಡೆಯುತ್ತಿರುವ ಭಾರತೀಯ ವಾಯುಪಡೆಯ ಪೈಲಟ್‌ಗಳ ಮೊದಲ ಬ್ಯಾಚ್‌ ತಮ್ಮ ಟ್ರೇನಿಂಗ್ ಮುಗಿಸಿದ್ದು, ಕೋವಿಡ್-19 ಲಾಕ್‌ಡೌನ್‌ ಕ್ರಮಗಳನ್ನು ಸಡಿಲಗೊಳಿಸಿದ ಕೂಡಲೇ ಎರಡನೇ ಬ್ಯಾಚ್‌ನ ಪೈಲಟ್‌ಗಳು ಅಲ್ಲಿಗೆ ಹೋಗಿ ತರಬೇತಿ ಪಡೆದುಕೊಂಡು ಬರಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *