Connect with us

ಏನ್ ಸುದ್ದಿ?

ಕಾಶ್ಮೀರ: 8 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

Published

on

Spread the love

ಭಾರತೀಯ ಸೇನೆಯ ಉತ್ತರ ಕಮಾಂಡ್‌‌ನ ಗಮನವೆಲ್ಲಾ ಈಗ ಲಡಾಖ್ ಮೇಲೆ ಇದೆ ಎಂದು ಭಾವಿಸಿದಂತೆ ಕಾಣುವ ಪಾಕಿಸ್ತಾನದ ಐಎಸ್‌ಐ, ಈ ಕಾಲಾವಕಾಶದ ಲಾಭ ಪಡೆದುಕೊಂಡು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾಕ ಚಟುವಟಿಕೆಗಳಿಗೆ ಚುರುಕು ನೀಡಲು ನೋಡುತ್ತಿರುವುದು ಅಚ್ಚರಿಯ ಸಂಗತಿಯೇನಲ್ಲ.

ಕಟ್ಟೆಚ್ಚರದ ಸ್ಥಿತಿಯಲ್ಲಿರುವ ಭಾರತೀಯ ಯೋಧರು ಇಲ್ಲಿನ ಅವಾಂತಿಪೋರಾ ಹಾಗೂ ಶೊಪಿಯಾನ್‌ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ ಎಂದು ಜಮ್ಮು & ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ತಿಳಿಸಿದ್ದಾರೆ.

ಸದಾ ಹೇಡಿಗಳಂತೆ ಸಾರ್ವಜನಿಕರು, ಮಹಿಳೆಯರು ಹಾಗೂ ಮಕ್ಕಳನ್ನು ಶೀಲ್ಡ್‌ಗಳಂತೆ ಬಳಸಿಕೊಳ್ಳುವ ಈ ಭಯೋತ್ಪಾದಕರು, ಅವಾಂತಿಪೋರಾದ ಪಾಂಪೋರೆಯಲ್ಲಿ ಮಸೀದಿಯೊಳಗೆ ನುಗ್ಗಿ ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ನೋಡಿದ್ದಾರೆ. ಆದರೆ, ಜಮ್ಮು & ಕಾಶ್ಮೀರ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚಣಾ ಕಮಾಂಡೋಗಳು ಅಖಾಡಕ್ಕೆ ಇಳಿದು, ಬರೀಗಾಲಿನಲ್ಲಿ ಮಸೀದಿಯ ಪ್ರಾಂಗಣ ಪ್ರವೇಶಿಸಿ, ಅಶ್ರುವಾಯು ಮೂಲಕ ಪಿಪಾಸುಗಳು ಹೊರಗೆ ಬರುವಂತೆ ಮಾಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕಣಿವೆಯಲ್ಲಿ ಮೊಬೈಲ್ ಇಂಟರ್ನೆಟ್‌ ಬಂದ್ ಮಾಡಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *