Connect with us

ಐತ್ ಲಗಾ

ವೈರಲ್ ಆಯಿತು ಲೆಫ್ಟೆನೆಂಟ್ ಕರ್ನಲ್ ಧೋನಿಯ ಚಿತ್ರ…!!!

Published

on

Spread the love

ಸೇನೆಯಲ್ಲಿ ತಮಗೆ ಸಿಕ್ಕ ಗೌರವಾನ್ವಿತ ಲೆಫ್ಟೆನೆಂಟ್ ಕರ್ನಲ್ ಹುದ್ದೆಗೆ ನ್ಯಾಯ ಸಲ್ಲಿಸಲು ಖುದ್ದು ಲಡಾಖ್ ಹಾಗೂ ಕಾಶ್ಮೀರದಲ್ಲಿ ಸೇನೆಯ ಯೋಧರೊಂದಿಗೆ ಕರ್ತವ್ಯ ನಿಭಾಯಿಸಿದ ಟೀಂ ಇಂಡಿಯಾದ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ದೇಶವಾಸಿಗಳ ಮನದಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದಾರೆ.

ಕಳೆದ ವರ್ಷದ ವಿಶ್ವಕಪ್ ಬಳಿಕ ಸುದೀರ್ಘಾವಧಿಯ ಬಿಡುವು ಪಡೆದಿರುವ ಧೋನಿ, ಜುಲೈ ಕೊನೆಯ ವಾರದಲ್ಲಿ 15 ದಿನಗಳ ಸೇನಾ ತರಬೇತಿಯನ್ನು ಪಡೆದರು. ಟೆರಿಟೋರಿಯಲ್ ಸೇನೆಯಲ್ಲಿ (ಪ್ಯಾರಚೂಟ್) ಲೆಫ್ಟಿನೆಂಟ್ ಕರ್ನಲ್ ಆಗಿರುವ ಧೋನಿ ಇದೇ ವೇಳೆ ಸಿಯಾಚಿನ್ ಯುದ್ಧ ಸ್ಮಾರಕಕ್ಕೂ ತೆರಳಿದ್ದರು.

ಗಸ್ತು ತಿರುಗುವ ಸಂದರ್ಭ ಸೈನಿಕರೊಬ್ಬರೊಂದಿಗೆ ಧೋನಿ ತೆಗೆಸಿಕೊಂಡ ಚಿತ್ರವೊಂದು ಟ್ವಿಟ್ಟರ್ ಅಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಮುಂಬರುವ ಐಪಿಎಲ್‌ಗೆ ಧೋನಿ ತಯಾರಿ ನಡೆಸುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್‌ನಲ್ಲಿ ಧೋನಿ ಭಾಗವಹಿಸಲು ಸಾಧ್ಯವಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಅದಾಗಲೇ ಹರಿದಾಡುತ್ತಿದೆ.

ಬಹಳ ದಿನಗಳಿಂದ ಅಂಕಣದಿಂದ ದೂರ ಉಳಿದಿದ್ದ ಧೋನಿಯ ಆಟವನ್ನು ಮುಂಬರುವ IPLನಲ್ಲಿ ನೋಡಿ ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
• ಹೇಮಂತ್, Karnaataka.in News Desk.