Connect with us

ಐತ್ ಲಗಾ

ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಈ ಐಡಿಯಾ ಹೆಂಗಿದೆ…!!!?

Published

on

Spread the love

ಈ ಜನಗಳ ಚೇಷ್ಟೆ ಬುದ್ಧಿಯೇ ಅಂಥಾದ್ದು. ವೋಟ್ ಹಾಕೋದಕ್ಕೆ ಮನೆಯಿಂದ ಹೊರಬನ್ನಿ ಅಂದ್ರೆ ಮನೆಯಲ್ಲೇ ಇರೋದು, ಈಗ ಕೊರೋನಾವೈರಸ್‌ ಅಂಟಿಕೊಳ್ಳುತ್ತೆ ಮನೆಯಲ್ಲೇ ಇರ‍್ರಪ್ಪಾ ಅಂದ್ರೆ, ತಲೆಕೆಟ್ಟವರಂತೆ ಹೊರಗಡೆ ಬಂದು ಏನಾಗ್ತಿದೆ ನೋಡೋದು.

ವಿಶ್ವಾದ್ಯಂತ 7.8 ಲಕ್ಷ ಮಂದಿಗೆ ಪೀಡಿಸಿ, 37,815 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೋನಾ ಹೆಮ್ಮಾರಿಯಿಂದ ಜನರನ್ನು ರಕ್ಷಿಸಲು ಜಗತ್ತಿನ ಬಹುತೇಕ ದೇಶಗಳೆಲ್ಲಾ ಲಾಕ್‌ಡೌನ್ ಆಗಿವೆ. ಇಂಥ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳದ ಕೆಲವು ಅವಿವೇಕಿಗಳು ಸುಖಾ ಸುಮ್ಮದೇ ಮನೆಯಿಂದ ಹೊರ ಬಂದು ಅಡ್ಡಡಲು ಮುಂದಾಗುತ್ತಿದ್ದಾರೆ.

ಹೊರಗಡೆ ಬಂದ್ರೆ ಪೊಲೀಸರಿಂದ ಗೂಸಾ ಬೀಳುತ್ತೆ ಅಂತೆ ಹೊಸ ಹೊಸ ಪ್ಲಾನ್ ಎಲ್ಲಾ ಮಾಡ್ಕೊತಾ ಇದಾರೆ ಈ ಕುಚೇಷ್ಟೆಗಳು. ಇವರುಗಳ ಪೈಕಿ ಒಬ್ಬ ಮೇಧಾವಿ ಇಂಥ ಐಡಿಯಾವನ್ನೂ ಮಾಡಿದ್ದಾನೆ.

ಬೇಲಿ ಹಾಗೂ ಪೊದೆಗಳನ್ನು ತನ್ನ ಮೈಮೇಲೆ ಅಮರಿಕೊಂಡ ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್‌ನ ಸ್ಟೆವಾಂಜೆಯ ವ್ಯಕ್ತಿಯೊಬ್ಬ ಮನೆಯಿಂದ ಹೊರ ಬಂದಿದ್ದು, ಅವನ ಈ ಲೀಲೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನಾವು ವರ್ಣಿಸಿ ಹೇಳುವುದಕ್ಕಿಂತ ನೀವೇ ಈ ವಿಡಿಯೋ ನೋಡಿ ಎಂಜಾಯ್ ಮಾಡಿ.
• Karnaataka.in News Desk.

Continue Reading
Click to comment

Leave a Reply

Your email address will not be published. Required fields are marked *