Connect with us

ಪ್ರೇಮ ಬರಹ

ಬಿಟ್ಟು ಹೋದ ಹುಡುಗ… ಮತ್ತು ಬದುಕು ಕೊಟ್ಟ ಹುಡುಗ..! ಹೆಣ್ಣುಮಕ್ಕಳಿಗೋಸ್ಕರ ಬರೆದ ಕಥೆ…

Published

on

Spread the love

ಅವನು ಸುಹಾಸ್… ಗಾಢನಿದ್ರೆಯಲ್ಲಿದ್ದ. ಯಾಕೋ ಇದ್ದಕ್ಕಿದ್ದ ಹಾಗೇ ಎಚ್ಚರವಾಯ್ತು. ಎದ್ದರೆ ಸುತ್ತ ಏನೂ ಇಲ್ಲ. ಯಾವತ್ತೂ ಅವನಿಗೆ ಹಾಗೆ ಆಗಿಲ್ಲ. ಆದ್ರೆ ಅದೇನೋ ಗೊತ್ತಿಲ್ಲ, ಅವನಿಗೆ ಎಚ್ಚರವಾಗಿದೆ. ಇತ್ತ ಮತ್ತೆ ನಿದ್ರೆಯೂ ಬರ್ತಿಲ್ಲ..! ಅವನು ಅಷ್ಟು ದೊಡ್ಡ ಮನೇಲಿ ಒಬ್ಬನೇ ಇರೋದು..! ಕೋಟ್ಯಧಿಪತಿಯ ಮಗ. ಆದ್ರೆ ಬೆಂಗಳೂರಿನಲ್ಲಿ ಅವನೊಬ್ಬನೇ..! ಅವನಿಗೇ ಅಂತಲೇ ಅವನ ಅಪ್ಪ ಬೆಂಗಳೂರಲ್ಲಿ ಆಫೀಸ್, ಮನೆ ಎಲ್ಲಾ ಮಾಡಿಕೊಟ್ಟಿದ್ದರು. ಹಾಗೆ ನಿದ್ದೆ ಬರ್ತಿಲ್ಲ, ಗಾರ್ಡನ್ ಅಲ್ಲಿ ವಾಕ್ ಮಾಡೋಣ ಅಂತ ಕೆಳಗಿಳಿದ. ಸದ್ದು ಮಾಡಿದ್ರೆ ಪಾಪ ಸೆಕ್ಯೂರಿಟಿ ಎದ್ದು ಬಿಡ್ತಾನೆ ಅಂತ ಸದ್ದು ಮಾಡದೇ ಕೆಳಗಿಳಿದು ಬಂದು ಗಾರ್ಡನ್ ಸುತ್ತ ಸಿಗರೇಟ್ ಸೇದುತ್ತಾ ಓಡಾಡ್ತಾ ಇದ್ದ. ಹಾಗೇ ದೃಷ್ಟಿ ಗೇಣಿನಿಂದ ಹೊರಗೆ ಹೋಯ್ತು.. ಅಲ್ಯಾರೋ ಕೂತಿದ್ದಾರೆ ಅನ್ನೋದು ಗೊತ್ತಾಗ್ತಾ ಇದೆ.. ಆದ್ರೆ ಸ್ಪಷ್ಟವಾಗಿ ಕಾಣ್ತಿಲ್ಲ..! ಯಾರಿರಬಹುದು ಅಂತ ಗೇಟಿನ ಬಳಿ ಹೋಗಿ ನೋಡಿದ್ರೆ, ಅವಳ್ಯಾರೋ ಸುಂದರಿ. ಕೈನಲ್ಲೊಂದು ಬ್ಯಾಗ್ ಇದೆ. ಕೂದಲು ಕೆದರಿದೆ. ಅವಳು ಕಷ್ಟದಲ್ಲಿದ್ದಾಳೆ ಅನ್ನೋದು ಅವಳನ್ನು ನೋಡಿದ್ರೇನೇ ಗೊತ್ತಾಗ್ತಿದೆ..!

ಮಾತಾಡಿಸಿದ್ರೆ ವಿಷಯ ಗೊತ್ತಾಗುತ್ತೆ ಅಂತ, ಅವಳ ಬಳಿ ಹೋಗಿ ನಿಲ್ತಾನೆ. ಅವಳು ಇವನನ್ನು ನೋಡಿ ಒಂದು ಕ್ಷಣ ಆತಂಕ ಆದ್ರೂ, ಎದ್ದು ನಿಂತು ತಲೆ ಬಗ್ಗಿಸ್ತಾಳೆ… ಅವನು ಕೇಳ್ತಾನೆ, ಯಾರು ನೀನು…? ಅವಳು ಉತ್ತರಿಸ್ತಾಳೆ… ನಾನು ಶಾನ್ವಿ.. ನನ್ನೂರು ಹುಬ್ಬಳ್ಳಿ.. ನಾನು ಲವ್ ಮಾಡ್ತಿದ್ದ ಹುಡುಗ ನನ್ನ ಮದ್ವೆ ಆಗ್ತೀನಿ ಅಂತ ನಂಬಿಸಿ, ನನ್ನ ಇಲ್ಲೇ ಬಿಟ್ಟು ಹೋಗಿ ಎರಡು ದಿನ ಆಯ್ತು..! ಅವನೆಲ್ಲಿದ್ದಾನೆ ಅಂತ ನಂಗೊತ್ತಿಲ್ಲ… ಅವನ ಫೋನ್ ಸ್ವಿಚ್ ಆಫ್ ಆಗಿದೆ… ನಾನು ಮನೆಗೆ ವಾಪಾಸ್ ಹೋಗೋಕೂ ಸಾಧ್ಯ ಇಲ್ಲ…ಬೆಳಗ್ಗೆ ತನಕ ಕಾಯ್ತೀನಿ… ಆಮೇಲೆ ನನ್ನ ಬದುಕಿಗೆ ಅಂತ್ಯ ಹಾಡ್ತೀನಿ’ ಅಂತಾಳೇ..!

ಅಯ್ಯೋ ಇದ್ಯಾವುದೋ ಹುಚ್ಚುಹುಡುಗಿ ಅನ್ನಿಸುತ್ತೆ ಅವನಿಗೆ. ಆದ್ರೂ `ಇಷ್ಟು ಹೊತ್ತಲ್ಲಿ ಹೆಣ್ಣು ಮಕ್ಕಳು ಹೀಗೆ ಒಬ್ಬೊಬ್ಬರೇ ಇರಬಾರದು. ನಿಮ್ ಮನೆ ನಂಬರ್ ಕೊಡೀ, ನಾನೇ ಅವರ ಜೊತೆ ಮಾತಾಡ್ತೀನಿ’ ಅಂತಾನೆ..! ಅವಳು ಒಪ್ಪೋದಿಲ್ಲ..! ಆಗಿದ್ದಾಗಲಿ ಅಂತ ಅವನು ಆ ಹುಡುಗಿಯ ಪಕ್ಕದಲ್ಲೇ ಬೆಳಗ್ಗೆ ತನಕ ಕೂತು ಕಾಯ್ತಾನೆ..! ಆದ್ರೆ ಅವಳ ಪ್ರಿಯತಮ ಬರಲೇ ಇಲ್ಲ…! ಬೆಳಗಾಗ್ತಿದ್ದ ಹಾಗೆ ಇವಳು ಬ್ಯಾಗ್ ಅಲ್ಲೇ ಬಿಟ್ಟು ಸುಮ್ಮನೆ ರಸ್ತೆಯಲ್ಲಿ ನಡೆಯೋಕೆ ಶುರು ಮಾಡ್ತಾಳೆ… ಇವನು ಎಷ್ಟು ಕರೆದರೂ ಅವಳು ಕೇಳೋದೇ ಇಲ್ಲ..! ನೋಡನೋಡ್ತಿದ್ದ ಹಾಗೆಯೇ ರಸ್ತೆಯ ಮಧ್ಯದಲ್ಲಿ ಹೋಗಿನಿಂತು ಬರ್ತಿದ್ದ ಲಾರಿಗೆ ಅಡ್ಡ ಹೋಗೋ ಪ್ರಯತ್ನ ಮಾಡ್ತಾಳೆ… ಅಷ್ಟರಲ್ಲಿ ಆ ಹುಡುಗ ಅವಳನ್ನು ತಳ್ಳಿ ಕಾಪಾಡ್ತಾನೆ..!

ಅವಳ ಕೆನ್ನೆಗೆ ಬಾರಿಸಿ, ಅವನ ಸೆಕ್ಯೂರಿಟಿಗೆ ಹೇಳಿ ಅವಳನ್ನು ಒಂದು ಪಿಜಿಗೆ ಸೇರಿಸಿ. ಅವಳನ್ನು ಕರೆದುಕೊಂಡು ಆಫೀಸಿಗೆ ಬರೋಕೆ ಹೇಳ್ತಾನೆ..! ಅವಳು ಕಣ್ಣೀರಲ್ಲೇ ಸೆಕ್ಯೂರಿಟಿ ಜೊತೆ ಹೋಗಿ, ರೆಡಿಯಾಗಿ ಸುಹಾಸ್ ಆಫೀಸಿಗೆ ಹೋಗ್ತಾಳೆ..
ಸುಹಾಸ್ ಅವಳನ್ನು ತನ್ನ ಚೇಂಬರಲ್ಲಿ ಕೂರಿಸಿಕೊಂಡು ಕೂಲಾಗಿ ಮಾತಾಡಿಸ್ತಾನೆ. ಅವಳು ವಿದ್ಯಾವಂತೆ..! ಧಾರವಾಡ ಯೂನಿವರ್ಸಿಟಿಯಲ್ಲಿ ಎಂಬಿಎ ಓದಿರೋ ಹುಡುಗಿ. ಅಂತಹಾ ಹುಡುಗಿ ಹೀಗೆ ಪ್ರೇಮಕ್ಕೆ ಬಿದ್ದು ಯಾಮಾರಿದ್ಲು..! ಅವಳಿಗೆ ಧೈರ್ಯ ತುಂಬಿ, ಅವನ ಆಫೀಸಲ್ಲೇ ಅವಳಿಗೆ ಸೆಕ್ರಟರಿ ಕೆಲಸ ಕೊಟ್ಟು ಅವಳಿಗೆ ಧೈರ್ಯ ತುಂಬ್ತಾನೆ..! ಅವಳಿಂದ ಅವಳ ಮನೆಗೆ ಫೋನ್ ಮಾಡಿಸಿ, ಕ್ಷಮೆ ಕೇಳಿಸಿ, ಇಲ್ಲಿ ಕೆಲಸ ಮಾಡ್ತಿರೋದಾಗಿ ಹೇಳಿಸ್ತಾನೆ…

ಹೀಗೇ ಬದುಕು ಸಾಗುತ್ತಾ..! ಶಾನ್ವಿ ಅದ್ಭುತವಾಗಿ ಕೆಲಸ ಮಾಡಿ ಆಫೀಸಿನ ಉನ್ನತಿಯಲ್ಲಿ ಭಾಗಿಯಾಗ್ತಾಳೆ..! ಹೀಗೇ ಒಂದು ದಿನ, ಸುಹಾಸ್ ಶಾನ್ವಿ ಬಳಿ ಬಂದು ಪ್ರೇಮ ನಿವೇದನೆ ಮಾಡಿಕೊಳ್ತಾನೆ..! ಅವಳಿಗೆ ಏನು ಹೇಳಬೇಕೋ ಗೊತ್ತಾಗೋದಿಲ್ಲ..! ಆದ್ರೂ ಮತ್ತೆ ಹೋದ ಪ್ರೀತಿಯ ಮರೆತು, ದೊರೆತ ಪ್ರೀತಿಯ ನೆನೆದು ಕಣ್ಣಿರಾಗಿ ಅವನನ್ನು ಬಿಗಿದಪ್ಪಿ ಐ ಲವ್ ಯೂ ಅಂತಾಳೆ…

ಇಲ್ಲಿ ಎರಡು ಅಂಶ ಇದೆ…! ಒಂದು ಮೋಸ ಮಾಡಿ ಹೋದ ಹುಡುಗ… ಇನ್ನೊಂದು ಬದುಕಿ ರೂಪಿಸಿದ ಹುಡುಗ…! ಪ್ರತಿ ಹೆಣ್ಣುಮಕಳ್ಳಿಗೂ ಅವರ ಆಯ್ಕೆಯಲ್ಲಿ ಈ ಅಂಶಗಳು ಗಮನದಿರಲಿ… ವಯಸ್ಸಿನ ಆಸೆ, ಮೋಹ ನಿಮ್ಮ ಜೀವವನ್ನೇ ಮುಗಿಸೋ ಪಾಶವಾಗದಿರಲಿ… ನಿಮ್ಮ ಪ್ರೇಮ ಮತ್ತು ಆಯ್ಕೆ ಬದುಕಿನ ಸಂತಸದ ಮೆಟ್ಟಿಲುಗಳಾಗಲಿ… ನೀವು ಶಾನ್ವಿಯ ಹಾಗೆ ಪ್ರೇಮದಲ್ಲಿ ಸೋತಾಗಲೆಲ್ಲಾ ಒಬ್ಬ ಸುಹಾಸ್ ಬರಲಾರ… ಹಾಗಾಗಿ ನಿಮ್ಮ ಮೊದಲ ಆಯ್ಕೆಯೇ ಸುಹಾಸ್ ತರಹದ ಅದ್ಭುತ ಹುಡುಗರಾಗಿರಲಿ…

 > ಪ್ರೇಮ ಸಂಜಾತ