Connect with us

ಏನ್ ಸುದ್ದಿ?

ತುದಿಗಾಲಲ್ಲಿ ನಿಂತ ವಾಯುಪಡೆ; ಮುನ್ನೆಲೆಗೆ ಬಂದವು ಸುಖೋಯ್‌, ಅಪಾಚೆ, ಮಿರೇಜ್, ಚಿನೂಕ್‌ಗಳು

Published

on

Spread the love

ವಾಸ್ತವ ನಿಯಂತ್ರಣ ರೇಖೆ ಬಳಿ ಚೀನಾದ ದುಸ್ಸಾಹಸಗಳಿಂದ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಪಡೆ ಕಟ್ಟೆಚ್ಚರದ ಸ್ಥಿತಿಯಲ್ಲಿದ್ದು, ತನ್ನ ಮುಂಚೂಣಿ ಯುದ್ಧ ವಿಮಾನಗಳನ್ನು ಮುನ್ನೆಲೆಗೆ ತಂದಿದೆ.

ಲಡಾಖ್‌, ಅದರಲ್ಲೂ ಗಲ್ವಾನ್‌ ಕಣಿವೆಯ ಸುತ್ತಲಿನ ಪ್ರದೇಶಗಳ ಮೇಲೆ ವಾಯುಪಡೆಯು ಸುಖೋಯ್‌-30 MKI ಹಾಗೂ ಅಪಾಚೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದ್ದು, ಪ್ರದೇಶದ ಮೇಲೆ ಹದ್ದಿನಗಣ್ಣಿಟ್ಟಿದೆ.

ಮಿರೇಜ್‌-2000 ಹಾಗೂ ಜಾಗ್ವರ್‌ ಯುದ್ಧವಿಮಾನಗಳೂ ಸಹ ಇದೇ ವೇಳೆ ಪಹರೆಯಲ್ಲಿವೆ.

ಉದ್ವಿಗ್ನ ಪ್ರದೇಶದಲ್ಲಿರುವ ಸೈನಿಕರಿಗೆ ರೇಷನ್, ಮದ್ದು-ಗುಂಡುಗಳು ಸೇರಿದಂತೆ ಯಾವುದೇ ರೀತಿಯ ಅತ್ಯಗತ್ಯ ವಸ್ತುಗಳ ಕೊರತೆಯುಂಟಾಗದಂತೆ ನೋಡಿಕೊಳ್ಳಲು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಸಹ ನಿಯೋಜನೆ ಮಾಡಲಾಗಿದೆ.

ಲೆಹ್ ಹಾಗೂ ಶ್ರೀನಗರದ ವಾಯುನೆಲೆಗಳಿಗೆ ವಾಯುಪಡೆ ಮುಖ್ಯಸ್ಥ ರಾಕೇಶ್ ಬದೌರಿಯಾ ಎರಡು ದಿನಗಳ ತುರ್ತು ಭೇಟಿಯಲ್ಲಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *